ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಟಿ. ಬೇಗೂರು ಕೆರೆಯಲ್ಲಿ ಮನಸೊ ಇಚ್ಛೆ ಮಣ್ಣು ತೆಗೆದು ಮಣ್ಣು ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ಜೆಸಿಬಿ ಯಂತ್ರದ ಮೂಲಕ ನೂರಾರು ಲೋಡ್ ಮಣ್ಣು ತೆಗೆದು ಕಿಡಿಗೇಡಿಗಳು ಸಾಗಿಸುತ್ತಿದ್ದರು. ಟಿ. ಬೇಗೂರಿನ ರೆವಿನ್ಯೂ ಅಧಿಕಾರಿಗಳು ಹಾಗೂ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ಇದ್ದರೂ ತಟಸ್ಥ ನೀತಿ ಸಾಕಷ್ಟು ಅನುಮಾನಗಳ ಆರೋಪ ಕೇಳಿ ಬಂದಿದೆ. ಇನ್ನೂ ನಂಬರ್ ಪ್ಲೇಟ್ ಇಲ್ಲದ ಜೆಸಿಬಿ ಬಳಸಿ ಕೆರೆಯ ಮಣ್ಣು ಲೂಟಿ ಮಾಡುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು, ಕಳೆದ ಒಂದು ವಾರದಿಂದ ಟಿ. ಬೇಗೂರು ಕೆರೆಯಲ್ಲಿ ಯಾರ ಭಯವು ಇಲ್ಲದೆ ಸುಮಾರು 6 ಲಾರಿಗಳನ್ನು ಬಳಸಿ ಮಣ್ಣು ಲೂಟಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
Advertisement
Advertisement
ಇವೆಲ್ಲವೂ ರೆವಿನ್ಯೂ ಅಧಿಕಾರಿಗಳ ಗಮನಕ್ಕೆ ಬಂದರೂ ಜಾಣ ಕುರುಡರಂತೆ ವರ್ತನೆ ಮಾಡುತ್ತಿದ್ದು, ಮಣ್ಣು ಲೂಟಿ ಕೋರರ ಜೊತೆ ಶಾಮೀಲಾಗಿರುವ ಸಂಶಯ ವ್ಯಕ್ತವಾಗಿದೆ. ಇನ್ನಾದರೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮಣ್ಣು ಲೂಟಿಕೋರರ ದಂಧೆಗೆ ಬ್ರೇಕ್ ಹಾಕಿ ಕೆರೆ ಅಭಿವೃದ್ಧಿ ಹಾಗೂ ರಕ್ಷಣೆಗೆ ಮುಂದಾಗಬೇಕಿದೆ. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ 60 ವಿದ್ಯಾರ್ಥಿಗಳು ಅಸ್ವಸ್ಥ – ಪ್ರಾಣಾಪಾಯದಿಂದ ಪಾರು
Advertisement