ಬೀದರ್: ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡದ್ದಿದ್ದರೆ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಔರಾದ್‍ನಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾವು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ತಕ್ಷಣವೇ ಕರ್ನಾಟಕದಲ್ಲಿ ಎಂಇಎಸ್ ಸಂಘಟನೆಯನ್ನು ಸರ್ಕಾರ ನಿಷೇಧ ಮಾಡಬೇಕು. ನಿಷೇಧ ಮಾಡದೇ ಇದ್ದರೆ ಸರ್ಕಾರದ ವಿರುದ್ಧ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ. ನಾವು ಸರ್ಕಾರಕ್ಕೆ ಒಂದು ವಾರ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧವೇ ಪ್ರತಿಭಟನೆಗೆ ಇಳಿಯುತ್ತೇವೆ ಎಂದರು. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ
ಕರ್ನಾಟಕ ಬಂದ್ ಬಗ್ಗೆ ಮುಂದೆ ಯೋಚನೆ ಮಾಡುತ್ತೇವೆ. ನಮ್ಮ ರಾಜ್ಯದಲ್ಲಿ ಬದುಕುವ ಕನ್ನಡಿಗರು ಯಾರೇ ಆಗಿರಲಿ. ಅದು ಬೀದರ್‍ನವರಾಗಿರಲಿ ಬೆಳಗಾವಿಯವರಾಗಿರಲಿ ಭಾಷೆ, ಸಂಸ್ಕತಿಗೆ ಹೊಂದುಕೊಂಡು ಬದುಕಿ ಇಲ್ಲವೇ ಗಂಟು ಮೂಟೆ ಕಟ್ಟಿ ನಿಮ್ಮೂರಿಗೆ ತೊಲಗಿ. ಎಂಇಎಸ್ ಹಾಗೂ ಶಿವಸೇನಾ ಪುಂಡಾಟಕ್ಕೆ ಮೂರು ಕಾಸಿನ ಬೆಲೆ ಕೊಡುವುದಿಲ್ಲ. ನಿಮ್ಮ ಪುಂಡಾಟ ಗೂಂಡಾಗಿರಿ ಮಹಾರಾಷ್ಟ್ರದಲ್ಲಿ ಇಟ್ಟುಕೊಳ್ಳಿ ಎಂದು ಸಿಡಿದರು. ಇದನ್ನೂ ಓದಿ: ಏರ್ ಇಂಡಿಯಾ ಹರಾಜು – ಟಾಟಾ ಡೀಲ್ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾ
ಸೊಲ್ಲಾಪುರ, ಸಾಂಗ್ಲಿ ಸೇರಿ ಕರ್ನಾಟಕಕ್ಕೆ ಸಾವಿರಾರು ಹಳ್ಳಿಗಳು ಬರಬೇಕಿತ್ತು. ಹೀಗಿರುವಾಗ ಬೀದರ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಬೊಬ್ಬೆ ಹೊಡೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.