ಮುಂಬೈ: ಅದೃಷ್ಟ ಯಾವಾಗ ಬೇಕಾದರೂ ಕೈ ಹಿಡಿಯಬಹುದು ಎನ್ನುವುದಕ್ಕೆ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಸಾಕ್ಷಿ. ಸ್ಪೇನ್ ಫುಟ್‌ಬಾಲ್ ಲೀಗ್ ನೋಡಲು ಟಿಕೆಟ್ ಬುಕ್ ಮಾಡಿದ್ದ ಸಿರಾಜ್ ಈಗ ಟಿ20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾದ ಭಾಗವಾಗಿದ್ದೇ ಅಚ್ಚರಿ.
ಭಾರತ ಫೆ.4 ಬುಧವಾರ ದಕ್ಷಿಣ ಆಫ್ರಿಕಾದ ಜೊತೆ ಅಭ್ಯಾಸ ಪಂದ್ಯವಾಡಿತ್ತು. ಈ ಪಂದ್ಯದಲ್ಲಿ ವೇಗಿ ಹರ್ಷಿತ್ ರಾಣಾ (Harshit Rana) ಮೊಣಕಾಲಿನ ಗಾಯಕ್ಕೆ ಒಳಗಾದರು. ಗಾಯ ತೀವ್ರಗೊಂಡಿದ್ದರಿಂದ ಕೊನೆಗೆ ತಂಡದಿಂದ ಕೈ ಬಿಡಲಾಯಿತು. ಅನುಭವಿ ವೇಗಿಯನ್ನು ಕೈಬಿಟ್ಟದ್ದರಿಂದ ಇವರ ಸ್ಥಾನಕ್ಕೆ ಯಾರೂ ಸೂಕ್ತ ಎಂದು ಹುಡುಕಾಡುತ್ತಿದ್ದಾಗ ಬಿಸಿಸಿಐ ಕಣ್ಣಿಗೆ ಕಾಣಿಸಿದ್ದೇ ಸಿರಾಜ್.
ತಾನು ತಂಡದಲ್ಲಿ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಸಿರಾಜ್, ನಾಯಕ ಸೂರ್ಯ ನನಗೆ ಕಾಲ್ ಮಾಡಿ ವಿಷಯ ತಿಳಿಸಿದರು. ಆರಂಭದಲ್ಲಿ ಕರೆ ಬಂದಾಗ ಇದು ಪ್ರಾಂಕ್ ಕರೆ ಎಂದೇ ಭಾವಿಸಿದ್ದೆ. ಕೆಲ ಸಮಯ ಟಿ20ಯಲ್ಲಿ ಭಾಗವಹಿಸದ ಕಾರಣ ನನ್ನ ಬಾಗಿಲು ಮುಚ್ಚಿದೆ ಎಂದು ಭಾವಿಸಿದ್ದೆ. ಆದರೆ ಆ ದೇವರು ನನ್ನ ಹಣೆ ಬರಹವನ್ನು ಬದಲಾಯಿಸಿದ್ದಾನೆ ಎಂದು ಸಂತಸ ಹಂಚಿಕೊಂಡರು.
Back in T20Is after 19 months and straight among the wickets! 😍
Welcome back, #MohammedSiraj 👏🔥
ICC Men’s #T20WorldCup | #INDvUSA | LIVE NOW 👉 https://t.co/GSioxLqv9R pic.twitter.com/vcchqVcenB
— Star Sports (@StarSportsIndia) February 7, 2026
ಕರೆ ಬಂದಾಗ ಸಿರಾಜ್ ಕುಟುಂದ ಜೊತೆ ಮನೆಯಲ್ಲಿದ್ದರು. ರಂಜಾನ್ ಸಮಯದಲ್ಲಿ ಕುಟುಂಬದ ಜೊತೆ ಜರ್ಮನಿ ಮತ್ತು ಸ್ಪೇನ್ ಪ್ರವಾಸಕ್ಕೆ ತೆರಳಲು ಕುಟುಂಬ ವಿಮಾನದ ಟಿಕೆಟ್ ಬುಕ್ ಎಲ್ಲವೂ ಆಗಿತ್ತು. ಫುಟ್‌ಬಾಲ್ ಅಭಿಮಾನಿಯಾಗಿರುವ ಸಿರಾಜ್ ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ಫೆ.15 ರಂದು ನಡೆಯಲಿದ್ದ ರಿಯಲ್ ಮ್ಯಾಡ್ರಿಡ್ ಪಂದ್ಯ ವೀಕ್ಷಿಸಬೇಕಿತ್ತು. ಇದನ್ನೂ ಓದಿ: ಸೂರ್ಯ, ಸಿರಾಜ್ ಮಿಂಚು; ಯುಎಸ್‌ಎ ವಿರುದ್ಧ ಭಾರತಕ್ಕೆ 29 ರನ್‌ಗಳ ಗೆಲುವು
ಕೊನೆಯ ಕ್ಷಣದಲ್ಲಿ ಸಿರಾಜ್ ಟೀಂ ಇಂಡಿಯಾವನ್ನು ಸೇರಿದರೂ ಯುಎಸ್‌ಎ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 4 ಓವರ್ ಎಸೆದು 29 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದಿದ್ದರು. ಆರಂಭಿಕ ಇಬ್ಬರೂ ಆಟಗಾರರನ್ನು ಸಿರಾಜ್ ಔಟ್ ಮಾಡಿ ಆರಂಭದಲ್ಲೇ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದರು.
ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಆಡಬೇಕಿತ್ತು. ಆದರೆ ಜ್ವರವಿದ್ದ ಕಾರಣ ಬುಮ್ರಾ ಜಾಗದಲ್ಲಿ ಸಿರಾಜ್ ಆಡಿದ್ದರು.

