ಟರ್ಕಿ: ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಗೆ ಗೊತ್ತಿಲ್ಲದೆ ಟ್ರೋಲ್ ಆಗುತ್ತಾರೆ. ಆದರೆ ಈ ರೀತಿ ಟ್ರೋಲ್ ಆದ ಬಾಲಕನೊಬ್ಬನ ಜೀವನದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ.
ಬಾಲಕನೊಬ್ಬ ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ಜಿಮ್ ಮಾಲೀಕರೊಬ್ಬರು ಬಾಲಕನ ಮಾಹಿತಿ ಕಲೆ ಹಾಕಿ ಆತನಿಗೆ ಅಚ್ಚರಿಯ ಗಿಫ್ಟ್ ನೀಡಿದ್ದಾರೆ.
Advertisement
ಅಂದಹಾಗೇ ಟ್ರೋಲ್ ಆದ ಫೋಟೋದಲ್ಲಿದ್ದ ಬಾಲಕ 12 ವರ್ಷದ ಮೊಹಮ್ಮದ್ ಹಾಲಿತ್ ಸಿರಿಯಾ ನಿರಾಶ್ರಿತನಾಗಿದ್ದು ಶೂ ಪಾಲಿಶ್ ಮಾಡುವ ಕಾರ್ಯಮಾಡಿಕೊಂಡಿದ್ದ. ಈತನ ಫೋಟೋವನ್ನು ಓಮರ್ ಯವುಜ್ ಎಂಬವರು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದು ಹೆಚ್ಚು ವೈರಲ್ ಆಗಿತ್ತು.
Advertisement
https://www.instagram.com/p/Bd0j-B4noWs/?taken-by=omeryavuz0202
Advertisement
ಇದನ್ನು ಕಂಡ ಜಿಮ್ ಮಾಲೀಕ ಮುಸ್ತಫಾ ಎಂಬವರು ಈತನ ವಿವರಗಳನ್ನು ಕಲೆ ಹಾಕಿದ್ದಾರೆ. ನಂತರ ಮೊಹಮ್ಮದ್ ಮಾಹಿತಿ ಪಡೆದು, ಆತನಿಗೆ ತಮ್ಮ ಜಿಮ್ ನಲ್ಲಿ ಲೈಫ್ ಟೈಮ್ ಮೆಂಬರ್‌ಶಿಪ್ ನೀಡಿದ್ದಾರೆ. ಅಲ್ಲದೇ ಆತನ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
ಮೊಹಮ್ಮದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ದೇಹದ ತೂಕವನ್ನು ಇಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇನೆ, ಅದನ್ನು ಸಾಧಿಸಿಸುತ್ತೇನೆ ಎಂದು ತಿಳಿಸಿದ್ದಾನೆ. ಜಿಮ್ ಮಾಲೀಕರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವರು ಈ ಕುರಿತು ಬೆಂಬಲ ಸೂಚಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
https://www.instagram.com/p/BddMGKvn9l4/?taken-by=omeryavuz0202
https://www.instagram.com/p/BdkWvw0FCNR/