ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಿಂದ (Siddaramaiah Government) ಸಿಂಡಿಕೇಟ್ ವರ್ಗಾವಣೆ (Syndicate Transfor) ದಂಧೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೇಲೆ ವೈಎಸ್‌ಟಿ ಟ್ಯಾಕ್ಸ್ (YST Tax) ಸರ್ಕಾರ ಅಂತ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಿಪಕ್ಷಗಳ ನಾಯಕರ ಸಭೆ – ಮತ್ತೆ ದಿನಾಂಕ ಮುಂದೂಡಿಕೆ
Advertisement
Advertisement
ನಾನು ಸಿಎಂ ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಇಲಾಖೆ ಮತ್ತು ಸಬ್ ರಿಜಿಸ್ಟರ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ವ್ಯವಸ್ಥೆ ಇತ್ತು. ಆದರೆ ನಾನು ಇದನ್ನು ಮಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಇದನ್ನು ಮಾಡುತ್ತಿದ್ದರು. ನಾನು ಕಣ್ಣು, ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದರೆ ಕಾಂಗ್ರೆಸ್ ಸಚಿವರೇ ಇದೆಲ್ಲವನ್ನೂ ಮಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಲ್ಲಿ ಸಿಂಡಿಕೇಟ್ ವರ್ಗಾವಣೆ ದಂಧೆ ನಡೆಯುತ್ತಿದೆ. ವರ್ಗಾವಣೆ ಮಾಡಲು ಸಿಂಡಿಕೇಟ್ ಮಾಡಿಕೊಂಡು ವರ್ಗಾವಣೆ ಮಾಡಿ ಹಣ ಮಾಡುತ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಏನಿದು ಸಿಂಡಿಕೇಟ್ ವರ್ಗಾವಣೆ ದಂಧೆ?
ಪ್ರತಿ ಇಲಾಖೆಯಲ್ಲಿ ವರ್ಗಾವಣೆ ಮಾಡಲು ಒಂದು ತಂಡ ಸಿಂಡಿಕೇಟ್ ಮಾಡಿಕೊಂಡಿರುತ್ತದೆ. ಐಎಎಸ್, ಐಪಿಎಸ್ ಸೇರಿ ಇಲಾಖೆಯಲ್ಲಿ ಯಾರು ಯಾರು ವರ್ಗಾವಣೆ ಆಗಬೇಕು ಎಂಬುದನ್ನು ಈ ಸಿಂಡಿಕೇಟ್ ನಿರ್ಧಾರ ಮಾಡುತ್ತದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಿಪಕ್ಷಗಳ ನಾಯಕರ ಸಭೆ – ಮತ್ತೆ ದಿನಾಂಕ ಮುಂದೂಡಿಕೆ
Advertisement
ಕೋಟಿ ಕೋಟಿ ಹಣ ಪಡೆದು ವರ್ಗಾವಣೆ ಮಾಡಲಾಗುತ್ತದೆ. ಈ ಸಿಂಡಿಕೇಟ್ ನಿರ್ಧಾರ ಮಾಡಿದವರೇ ಆಯಾ ಜಾಗಕ್ಕೆ ವರ್ಗಾವಣೆ ಆಗಬೇಕು. ವರ್ಗಾವಣೆ ಎಲ್ಲಿಗೆ ಆಗಬೇಕು ಅಂತ ಈ ಸಿಂಡಿಕೇಟ್ ಹಣ ಪಡೆದು ನಿರ್ಧಾರ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.
Web Stories