ಲಕ್ನೋ: ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ದೇಶವೇ ತಲ್ಲಣಗೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಈ ಮಧ್ಯೆ ವೈರಸ್ ಹೆಸರನ್ನು ಉತ್ತರ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವೊಂದಕ್ಕೆ ನಾಮಕರಣ ಮಾಡಲಾಗಿದೆ.
ಜನತಾ ಕರ್ಫ್ಯೂ ದಿನಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಅಂದ್ರೆ ಭಾನುವಾರ ಗೋರಖಪುರದ ಸೊಹಗೌರಾ ಗ್ರಾಮದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆ ಬಳಿಕ ಮಗುವಿನ ಚಿಕ್ಕಪ್ಪ ಕೊರೊನಾ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಂಭವಾಗಿದೆ.
Advertisement
Advertisement
ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿರುವ ಚಿಕ್ಕಪ್ಪ ನಿತೇಶ್ ತ್ರಿಪಾಠಿ, ಕೊರೊನಾ ಸೋಂಕು ಭಯಾನಕವಾಗಿದೆ ಎನ್ನುವುದರಲಿ ಯಾವುದೇ ಸಂದೇಹವೇ ಇಲ್ಲ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅನೇಕ ಜನರನ್ನು ಬಲಿ ಪಡೆದುಕೊಂಡಿದೆ. ಆದರೆ ಇದರಿಂದ ಅನುಕೂಲವೂ ಆಗಿದೆ. ಕೊರೊನಾ ವೈರಸ್‍ನಿಂದಾಗಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ, ಜತ್ತಿನ ಎಲ್ಲಾ ದೇಶಗಳು ಒಂದಾಗಿ ಹೋರಾಡುತ್ತಿವೆ. ಹೀಗಾಗಿ ಈ ಮಗು ದುಷ್ಟರ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಸಂಕೇತವಾಗಿರುತ್ತದೆ ಎಂದು ತಿಳಿಸಿದ್ದಾರೆ.
Advertisement
ಮಗುವಿನ ತಾಯಿ ರಜಿನಿ ತ್ರಿಪಾಠಿ ಹಾಗೂ ಪೋಷಕರ ಒಪ್ಪಿಗೆ ಪಡೆದೇ ಕೊರೊನಾ ಅಂತ ನಾಮಕರಣ ಮಾಡಲಾಗಿದೆ ಎಂದು ನಿತೇಶ್ ತ್ರಿಪಾಠಿ ಹೇಳಿದ್ದಾರೆ.