ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ

Public TV
2 Min Read
KARNATAKA TEAM

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಸೆಮಿಫೈನಲ್‍ನಲ್ಲಿ ವಿದರ್ಭ ವಿರುದ್ಧ ರೋಚಕವಾಗಿ 4 ರನ್ ಗಳಿಂದ ಗೆದ್ದ ಮನೀಶ್ ಪಾಂಡೆ ಸಾರಥ್ಯದ ಕರ್ನಾಟಕ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದೆ.

KARNATAKA

ಗೆಲ್ಲಲು 177 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವಿದರ್ಭ ಕೊನೆಯವರೆಗೆ ಗೆಲುವಿಗಾಗಿ ಹೋರಾಡಿತು. 17 ಓವರ್‌ಗಳ ಅಂತ್ಯಕ್ಕೆ 135 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವಿದರ್ಭ ತಂಡ ಈ ಓವರ್‌ನಲ್ಲಿ 4 ರನ್ ಮಾತ್ರ ಗಳಿಸಿತು. 18 ನೇ ಓವರ್‍ನಲ್ಲಿ 18 ರನ್ ಬಂದರೆ ಕೊನೆಯ ಓವರ್‌ನಲ್ಲಿ ಗೆಲ್ಲಲು 13 ರನ್‍ಗಳ ಅವಶ್ಯಕತೆ ಇತ್ತು. ಕೈಯಲ್ಲಿ ಇನ್ನೂ 5 ವಿಕೆಟ್‍ಗಳಿದ್ದವು. ಅಪೂರ್ವ ವಾಂಖಡೆ ಮತ್ತು ಅಕ್ಷಯ್ ಕರ್ನೇವರ್ ಬ್ಯಾಟಿಂಗ್‍ನಲ್ಲಿದ್ದರು. ಕರ್ನಾಟಕ ಪರ ಕೊನೆಯ ಓವರ್ ಎಸೆಯಲು ಬಂದ ವಿದ್ಯಾಧರ ಪಾಟೀಲ್ ಅವರ ಪ್ರಥಮ ಎಸೆತದಲ್ಲೆ ಅಕ್ಷಯ್ ಕರ್ನೇವರ್ ಔಟ್ ಆದರು. 2ನೇ ಎಸೆತದಲ್ಲಿ 1 ರನ್ ಬಂದರೆ ಮೂರನೇ ಎಸೆತ ವೈಡ್ ರನ್ ಬಂತು. ನಂತರದ ಮೂರು ಎಸೆತಗಳಲ್ಲಿ 3 ಸಿಂಗಲ್ ರನ್ ಬಂತು. ಕಡೆಯ ಎಸೆತದಲ್ಲಿ ದರ್ಶನ್ ನಲ್ಕಂಡೆ ಬೌಂಡರಿ ಬಾರಿಸಿದರು ಕೂಡ ಪ್ರಯೋಜನವಾಗಲಿಲ್ಲ. ಇದನ್ನೂ ಓದಿ: ಮೈದಾನದಲ್ಲಿ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ – ವಿಡಿಯೋ ವೈರಲ್

ವಿದರ್ಭ 20 ಓವರ್‌ಗಳಲ್ಲಿ 6 ವಿಕೆಟ್‍ಗಳಿಂದ 172 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಮೂಲಕ 4 ರನ್‍ಗಳ ರೋಚಕ ಜಯದೊಂದಿಗೆ ಕರ್ನಾಟಕ ತಂಡ ಫೈನಲ್‍ಗೇರಿದೆ. 2ನೇ ಸೆಮಿಫೈನಲ್‍ನಲ್ಲಿ ತಮಿಳುನಾಡು ಹೈದರಾಬಾದ್‌ ತಂಡವನ್ನು ಸೋಲಿಸಿದೆ.  ಸೋಮವಾರ ದೆಹಲಿಯಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

KARNATAKA TEAM 1

ದರ್ಶನ್ ನಲ್ಕಂಡೆ ಹ್ಯಾಟ್ರಿಕ್ ವಿಕೆಟ್

ಈ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ನಾಯಕ ಮನೀಶ್ ಪಂಡೆ ಮತ್ತು ರೋಹನ್ ಕದಮ್ ಭರ್ಜರಿ ಆರಂಭ ನೀಡಿದರು. 132 (91 ಎಸೆತ) ರನ್‍ಗಳ ಜೊತೆಯಾಟವಾಡಿದರು. ಮನೀಶ್ ಪಾಂಡೆ 54 ರನ್ (42 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರೆ ರೋಹನ್ ಕದಮ್ 87 ರನ್ (56 ಎಸೆತ, 7 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಇವರಿಬ್ಬರು ಔಟ್ ಆದ ಬಳಿಕ ದೀಢಿರ್ ಕುಸಿತ ಕಂಡ ಕರ್ನಾಟಕ ವಿಕೆಟ್ ಕಳೆದುಕೊಂಡು ಸಾಗಿತು. 19ನೇ ಓವರ್ ಎಸೆದ ದರ್ಶನ್ ನಲ್ಕಂಡೆ ಹ್ಯಾಟ್ರಿಕ್ ವಿಕೆಟ್ ಕಿತ್ತು ಕರ್ನಾಟದ ರನ್‍ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಕರ್ನಾಟಕ ತಂಡ 7 ವಿಕೆಟ್ ಕಳೆದುಕೊಂಡು 176 ರನ್ ಪೇರಿಸಿತು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಜೊತೆ ಆರ್‌ಸಿಬಿಗೂ ವಿದಾಯ ಹೇಳಿದ ಎಬಿಡಿ

VIDARBA CRICKET TEAM

ವಿದರ್ಭ ಪರ ದರ್ಶನ್ ನಲ್ಕಂಡೆ 4 ವಿಕೆಟ್ ಕಿತ್ತು ಮಿಂಚಿದರೆ, ಲಲಿತ್ ಯಾದವ್ 2 ವಿಕೆಟ್ ಮತ್ತು ಯಶ್ ಠಾಕೂರ್ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *