ಟಾಲಿವುಡ್‍ನ ‘ಸೈರಾ ನರಸಿಂಹ ರೆಡ್ಡಿ’ ಭಾರತೀಯ ಚಿತ್ರರಂಗದಲ್ಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾವಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಇದು ತೆರೆ ಕಾಣಲಿದೆ. ಸದ್ಯ ಆಡಿಯೋ ಹಕ್ಕುಗಳ ವಿಚಾರವಾಗಿ ಎಲ್ಲರ ಚಿತ್ತವಿತ್ತು. ಈಗ ಈ ಸಿನಿಮಾದ ಆಡಿಯೋ ಹಕ್ಕು ಯಾರ ಪಾಲಾಗಲಿದೆ ಎಂಬ ನಿರೀಕ್ಷೆಗೆ ತೆರೆ ಬಿದ್ದಿದೆ. ಕನ್ನಡದ ಅತಿ ಹೆಚ್ಚು ಹಾಡುಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ಲಹರಿ ಸಂಸ್ಥೆ ‘ಸೈರಾ’ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ.
Advertisement
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸೈರಾ ಸಿನಿಮಾದ ಆಡಿಯೋ ಹಕ್ಕು ಲಹರಿ ಸಂಸ್ಥೆ ಮಡಿಲಿಗೆ ಬಿದ್ದಿದೆ. ಈ ಹಕ್ಕುಗಳನ್ನು ಕೊಳ್ಳಲು ಹಲವಾರು ಕಂಪನಿಗಳು ತುದಿಗಾಲಲ್ಲಿ ನಿಂತಿದ್ದವು. ಆದರೆ ಎಲ್ಲರನ್ನು ಹಿಮ್ಮೆಟ್ಟಿಸಿ ಮತ್ತೊಂದು ಬಿಗ್‍ಬಜೆಟ್ ಸಿನಿಮಾವನ್ನು ಈ ಸಂಸ್ಥೆ ತನ್ನದಾಗಿಸಿಕೊಂಡಿದೆ. ಲಹರಿ ಸಂಸ್ಥೆ ಬರೋಬ್ಬರಿ ಐದು ಕೋಟಿಗೆ ಸಿನಿಮಾದ ಆಡಿಯೂ ಹಕ್ಕನ್ನು ಖರೀದಿ ಮಾಡಿದೆ ಎಂದು ವರದಿಯಾಗಿದೆ.
Advertisement
Advertisement
ಈಗಾಗಲೇ ಲಹರಿ ಆಡಿಯೋ ಸಂಸ್ಥೆ ಪಂಚಭಾಷೆಗಳ ಹಲವಾರು ಸ್ಟಾರ್‌ಗಳ ಸಿನಿಮಾ ಆಡಿಯೋ ಹಕ್ಕು ಖರೀದಿಸಿದೆ. ಹಾಗೇ ಯೂಟ್ಯೂಬ್ ಗೋಲ್ಡ್ ಮೆಂಬರ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಕನ್ನಡದ ಸಕ್ಸಸ್ ಫುಲ್ ಸಿನಿಮಾಗಳಾದ ಕೆ.ಜಿ.ಎಫ್, ಕುರುಕ್ಷೇತ್ರ, ಜಾಗ್ವಾರ್, ಕಿಲ್ಲಿಂಗ್ ವೀರಪ್ಪನ್, ಪೈಲ್ವಾನ್ ಸೇರಿದಂತೆ ಬಿಗ್ ಸ್ಟಾರ್‌ಗಳ ಸಿನಿಮಾದ ಆಡಿಯೋ ಹಕ್ಕನ್ನು ಕೊಂಡಿದೆ.