ಮೆಲ್ಬರ್ನ್ : ವಿರಾಟ್ ಕೊಹ್ಲಿ (Virat Kohli) ಸಿಡ್ನಿ ಸಿಕ್ಸರ್ ಪರ ಆಡಲಿದ್ದಾರೆ. ಹೀಗಂತ ಸಿಡ್ನಿ ಸಿಕ್ಸರ್ (Sydney Sixers) ತಂಡವೇ ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕೊಹ್ಲಿ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ತಲೆಗೆ ಹುಳ ಬಿಟ್ಟಿದೆ.
ಭಾರತದಲ್ಲಿ ಹೇಗೆ ಇಂಡಿಯನ್ ಪೀಮಿಯರ್ ಲೀಗ್ (IPL) ಇದೆಯೋ ಅದೇ ರೀತಿ ಆಸ್ಟ್ರೇಲಿಯಾದಲ್ಲಿ (Austrila) ಬಿಗ್ ಬ್ಯಾಷ್ ಲೀಗ್ (BBL) ಇದೆ. ಈ ಲೀಗ್‌ನಲ್ಲಿರುವ ಸಿಡ್ನಿ ಸಿಕ್ಸರ್, ಮುಂದಿನ ಎರಡು ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಮ್ಮ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಪೋಸ್ಟ್ ಮಾಡಿದೆ.
April Fools
— Sydney Sixers (@SixersBBL) April 1, 2025
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನಲ್ಲೇ ಸಿಡ್ನಿ ಸಿಕ್ಸರ್ ಏಪ್ರಿಲ್ ಫೂಲ್ಸ್ ಡೇ (April Fools Day) ಎಂದು ಪೋಸ್ಟ್ ಮಾಡಿ ಎದ್ದಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.
ಬಿಸಿಸಿಐ (BCCI) ಐಪಿಎಲ್‌ಗೆ ಆದ್ಯತೆ ನೀಡುವ ಮತ್ತು ದೇಶೀಯ ಕ್ರಿಕೆಟ್ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ನೀತಿಯಿಂದಾಗಿ ಭಾರತೀಯ ಆಟಗಾರರು ಇತರ ಕ್ರಿಕೆಟ್ ಲೀಗ್‌ಗಳಿಗೆ ಆಸಕ್ತಿ ತೋರಿಸುತ್ತಿಲ್ಲ. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್ ಮಾಡಿ – ರಿಯಾನ್ ಪರಾಗ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
ಇದರ ಜೊತೆ ಇನ್ನೊಂದು ಕಾರಣ ಇದೆ. ಭಾರತದ ಯಾವುದೇ ಕ್ರಿಕೆಟಿಗ ಕೂಡ ವಿದೇಶಿ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಬೇಕೆಂದರೆ ಆ ಆಟಗಾರ ಬಿಸಿಸಿಐ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್ ಮಾಡಿದವರಿಗೆ ಚಳಿ ಬಿಡಿಸಿದ ನಟಿ
ಬಿಸಿಸಿಐ ವಿದೇಶಿ ಟೂರ್ನಿಗೆ ಹೋಗಲೇಬಾರದು ಎಂದು ಯಾವುದೇ ನಿರ್ಬಂಧ ಹೇರಿಲ್ಲ. ಸದ್ಯ ಐಪಿಎಲ್‌ನಷ್ಟು ಪ್ರಚಾರ ಬೇರೆ ಯಾವುದೇ ಕ್ರಿಕೆಟ್ ಟೂರ್ನಿಗೆ ಇಲ್ಲ. ಹೀಗಾಗಿ ಭಾರತದ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.