ಕ್ಯಾನ್ಬೆರಾ: ಸಿಡ್ನಿ (Sydney) ರೈಲ್ವೆ ನಿಲ್ದಾಣದಲ್ಲಿ ಕ್ಲೀನರ್‌ಗೆ ಚಾಕುವಿನಿಂದ ಇರಿದ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಆಸ್ಟ್ರೇಲಿಯಾ ಪೊಲೀಸರು (Australian police) ಭಾರತೀಯನನ್ನು (Indian) ಗುಂಡಿಕ್ಕಿ ಕೊಂದಿದ್ದಾರೆ.
ಮೃತನನ್ನು ತಮಿಳುನಾಡು (Tamil Nadu) ಮೂಲದ ಮೊಹಮ್ಮದ್ ರಹಮತುಲ್ಲಾ ಸೈಯದ್ ಅಹ್ಮದ್ (32) ಎಂದು ಗುರುತಿಸಲಾಗಿದೆ. ಈತ ಬ್ರಿಡ್ಜಿಂಗ್ ವೀಸಾದಲ್ಲಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ.
ಅಹ್ಮದ್ ಆಬರ್ನ್ ಪೊಲೀಸ್ ಠಾಣೆಯನ್ನು ತಲುಪುವ ಮೊದಲು ಸಿಡ್ನಿಯ ಆಬರ್ನ್ ಠಾಣೆಯಲ್ಲಿ 28 ವರ್ಷದ ಕ್ಲೀನರ್ ಮೇಲೆ ಹಲ್ಲೆ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ರೈಲುಗಳ ನಡುವೆ ಭೀಕರ ಅಪಘಾತ- 16 ಮಂದಿ ದುರ್ಮರಣ
ಈ ವೇಳೆ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಅಹ್ಮದ್‍ಗೆ ಎದುರಾದರು. ಅವರ ಮೇಲೂ ಅಹ್ಮದ್ ದಾಳಿ ಮಾಡಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ದಾಳಿಯಿಂದ ತಪ್ಪಿಸಿಕೊಳ್ಳಲು 3 ಬಾರಿ ಗುಂಡು ಹಾರಿಸಿದ್ದಾರೆ. ಈ ವೇಳೆ 2 ಗುಂಡು ಅಹ್ಮದ್ ಎದೆಗೆ ತಗುಲಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಂಬಾನಿ, ಕುಟುಂಬಕ್ಕೆ z+ ಭದ್ರತೆ ನೀಡಿ: ಸುಪ್ರೀಂ