ಬರ್ನ್: ಸ್ವಿಟ್ಜರ್‌ಲೆಂಡ್‌ನಲ್ಲಿ (Switzerland) ಬುರ್ಖಾ (Burqa) ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ 83 ಸಾವಿರ ರೂ. ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭಾರತದಲ್ಲಿ ಹಿಜಬ್ (Hijab) ಬೇಕು, ನಮ್ಮ ಆಯ್ಕೆ, ಇಸ್ಲಾಂ (Muslim Community) ಅವಿಭಾಜ್ಯ ಅಂಗ ಎಂದು ಹೋರಾಟ ನಡೆಯುತ್ತಿದೆ. ಆದರೆ ಇರಾನ್‌ನಲ್ಲಿ (Iran) ಹಿಜಬ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಹಲವು ಪ್ರತಿಭಟನಾಕಾರರು ಗುಂಡಿಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಚಂಡಿಯಲ್ಲಿ ಪತ್ತೆ
Advertisement
Advertisement
ಈ ಹೋರಾಟ, ವಾದ-ವಿವಾದಗಳ ನಡುವೆ ಸ್ವಿಟ್ಜರ್‌ಲೆಂಡ್‌ನಲ್ಲಿ ಬುರ್ಖಾ ಬ್ಯಾನ್ ಹಾಗೂ ಈ ನಿಯಮ ಉಲ್ಲಂಘಿಸಿದರೆ 82,000 ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ತಿಂಗಳ ಅಕ್ಟೋಬರ್ 12 ರಂದು ಸ್ವಿಟ್ಜರ್‌ಲೆಂಡ್ ಸಂಸತ್ತಿನಲ್ಲಿ ಈ ಮಸೂದೆ ಮಂಡಿಸಲಾಗಿದೆ. ಕಳೆದ ವರ್ಷ ಸ್ವಿಟ್ಜರ್‌ಲೆಂಡ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲು ಮತದಾನ ಮಾಡಲಾಗಿತ್ತು. ಇದೀಗ ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಸ್ತಾವನೆ ಕರಡು ಮಸೂದೆಯನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
Advertisement
Advertisement
ಮೂಸೂದೆ ಅಂಗೀಕಾರವಾದರೆ ಈ ನಿಯಮದ ಪ್ರಕಾರ ಹಿಜಬ್ ಧರಿಸಲು ಅವಕಾಶವಿದೆ. ಆದರೆ ಕಣ್ಣು ಮಾತ್ರ ಕಾಣಿಸುವ ಮುಖದ ಇತರ ಭಾಗಗಳು ಮುಚ್ಚುವ ವಸ್ತ್ರಗಳನ್ನು ಧರಿಸುವ ಅವಕಾಶವಿಲ್ಲ. ಕಳೆದ ವರ್ಷ ಈ ಪ್ರಸ್ತಾವನೆಗೆ ಸ್ವಿಟ್ಜರ್‌ಲೆಂಡ್‌ನ ಶೇ.51.2 ಮಂದಿ ಬೆಂಬಲಿಸಿದ್ದರು. ಇದೇ ವೇಳೆ ಇನ್ನುಳಿದ ಕೆಲವರು ಪ್ರಮುಖವಾಗಿ ಮುಸ್ಲಿಮರು ಇದನ್ನು ಟೀಕಿಸಿದ್ದರು.