ಚಂಡೀಗಢ್: ಸ್ನೇಹಿತನೊಂದಿಗೆ ಕೇವಲ 100 ರೂ. ಬೆಟ್ ಕಟ್ಟಿ, ಯಮುನಾ ನದಿಗೆ ಹಾರಿ ಯುವಕರಿಬ್ಬರು ಮೃತಪಟ್ಟ ಘಟನೆ ಹರಿಯಾಣದ ಬಲ್ಲಭಗಢ್ (ವಲ್ಲಭಗಢ್) ನಡೆದಿದೆ.
ಕೃಷ್ಣ ಹಾಗೂ ರಾಹುಲ್ ಮೃತಪಟ್ಟ ಯುವಕರು. ಗುರುವಾರ ಸಂಜೆ ಇಬ್ಬರು ಸ್ನೇಹಿತ ಕಟ್ಟಿದ್ದ ಬೆಟ್ನಿಂದಾಗಿ, ರಭಸವಾಗಿ ಹರಿಯುತ್ತಿದ್ದ ಯಮುನಾ ನದಿಗೆ ಹಾರಿದ್ದರು. ನದಿಯ ರಭಸಕ್ಕೆ ಮೇಲೆ ಏಳಲು ಆಗದೆ ಮುಳುಗಿ, ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.
Advertisement
ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ, ಎನ್ಡಿಆರ್ಎಫ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಎನ್ಡಿಆರ್ಎಫ್ ತಂಡ ಯುವಕರ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಗುರುವಾರ ರಾತ್ರಿ ಕಾರ್ಯಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.
Advertisement
ಶುಕ್ರವಾರ ರಾಹುಲ್ ಮೃತದೇಹವು ಪಲ್ವಲ್ ಎಂಬಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews