ಚೆನ್ನೈ: ವಯಸ್ಸು ಯಾವುದೇ ಸಾಧನೆಗೆ ಅಡ್ಡಿ ಬರುವುದಿಲ್ಲ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವೃದ್ಧೆ 85ರ ವಯಸ್ಸಿನಲ್ಲಿಯೂ ನೀರಿಗೆ ಜಿಗಿದು ಮೀನಿನಂತೆ ಈಜುತ್ತಾ, ಯುವ ಜನತೆಗೆ ಈಜು ಕಲಿಸುತ್ತಾ ಸೈ ಎನಿಸಿಕೊಂಡಿದ್ದಾರೆ.
85ರ ವಯಸ್ಸಿನ ಪಾಪಾ ಅವರು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ರಾಶಿಪುರಂನ ವೆನಂದೂರು ನಿವಾಸಿಯಾಗಿದ್ದಾರೆ. ಪಾಪಾ ಅವರು ನದಿ, ಕೆರೆ, ಬಾವಿಗಳಲ್ಲಿ ಸಲೀಸಾಗಿ ಈಜಬಲ್ಲರು. ಇವರು ಈಜುವುದು ಮಾತ್ರವಲ್ಲಿದೇ ಹಲವರಿಗೆ ಈಜನ್ನು ಹೇಳಿಕೊಡುವ ಮೂಲಕವಾಗಿ ತಮಿಳುನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಈಜನ್ನು ಹವ್ಯಾಸವಾಗಿ ಮುಂದುವರೆಸಿಕೊಂಡು ಬಂದು ಇದೀಗ ನೂರಾರು ಜನರಿಗೆ ಈಜು ತರಬೇತಿ ನೀಡುತ್ತಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ
Advertisement
Advertisement
ತನ್ನ ಸಾಧನೆ ಕುರಿತಾಗಿ ಮಾತನಾಡಿದ ಪಾಪ, ನಾನು 5 ವರ್ಷದವಳಿದ್ದಾಗ ತಂದೆಯಿಂದ ಈಜನ್ನು ಕಲಿತಿದ್ದೇನೆ. ಈಗ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಈಜನ್ನು ನಾನೇ ಕಲಿಸಿದ್ದೇನೆ. ನನ್ನ ಬಳಿ ಐದರಿಂದ 40 ವರ್ಷದವರೂ ಈಜು ಕಲಿಯಲು ಬರುತ್ತಾರೆ. ವಯಸ್ಸು 80 ದಾಟಿದರೂ ಇತರರಿಗೆ ಕಲಿಸಬೇಕೆಂಬ ಹಂಬಲ ನನ್ನಲ್ಲಿ ಹಾಗೆಯೇ ಇದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್ ಚುನಾವಣೆಯಲ್ಲಿ ಕಣಕ್ಕೆ
Advertisement
Advertisement
ಫ್ರಿಸ್ಟೈಲ್, ಸೈಡ್‍ಸ್ಟ್ರೋಕ್, ಬ್ಯಾಕ್ ಸ್ಟ್ರೋಕ್ ಸೇರಿದಂತೆ ಹಲವು ವಿಧದ ಈಜು ಪಾಪಾ ಅವರಿಗೆ ಕರಗತವಾಗಿದೆ. ನಿಜವಾಗಿಯೂ ಇಂದಿನ ಜನತೆಗೆ ಈ ವೃದ್ಧೆ ಸ್ಪೂರ್ತಿಯಾಗಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI