ಮಂಡ್ಯ: ದೇವಸ್ಥಾನಕ್ಕೆ ಹರಕೆ ತೀರಿಸಲು ಹೊರಟ ಎಂಟು ಮಂದಿ ಸ್ನೇಹಿತರ ತಂಡವೊಂದು ಪೂಜೆಯ ಬಳಿಕ ಊಟ ಮಾಡಿ ಕಾಲುವೆಗೆ ಈಜಲು ಹೋಗಿ ಸಂಭವಿಸಿದ ಅವಘಡದಲ್ಲಿ ಮೂವರು ಸ್ನೇಹಿತರು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
Advertisement
ಮಂಡ್ಯದ ಕೆಆರ್ ಪೇಟೆ ತಾಲೂಕಿನ ಹೇಮಗಿರಿ ಬಳಿಯಿರುವ ಚಂದಗೋಳಮ್ಮ ದೇವಸ್ಥಾನದ ಎದುರಿರುವ ಮಂದಗೆರೆ ಬಲದಂಡಾ ನಾಲೆಯಲ್ಲಿ ಘಟನೆ ನಡೆದಿದ್ದು, ಮೈಸೂರಿನ ಬೆಲವತ್ತಮಂಟಿ ನಗರದ ಆಟೋ ಡ್ರೈವರ್ ರವಿ(27), ಗಾರೆ ಕೆಲಸಗಾರರಾದ ಕುಂಬಾರಕೊಪ್ಪಲು ನಗರದ ಯೋಗಶ್(24), ಲೋಕನಾಯಕನಗರದ ಮಂಜು(24) ನೀರು ಪಾಲಾದ ದುರ್ದೈವಿಗಳು. ಇದನ್ನೂ ಓದಿ: ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ
Advertisement
Advertisement
ಮೈಸೂರಿನಿಂದ ಎಂಟು ಯುವಕರ ತಂಡ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಕೋಳಿ ಹರಕೆ ಮಾಡಿ ಊಟ ತಯಾರಿಸಿ ಸವಿದಿದ್ದಾರೆ. ಬಳಿಕ ರವಿ ಎಂಬವರು ಪಕ್ಕದಲ್ಲಿದ್ದ ನಾಲೆಯಲ್ಲಿ ಈಜಲು ಮುಂದಾಗಿದ್ದಾರೆ. ಕೆಲಕಾಲ ಈಜಿದ್ದಾರೆ, ಸ್ವಲ್ಪ ಸಮಯದ ನಂತರ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ ರವಿಯನ್ನು ಕಾಪಾಡಲು ಯೋಗೇಶ್ ಎಂಬವರು ನೀರಿಗೆ ಇಳಿದಿದ್ದಾರೆ. ಆದರೆ ಯೋಗೇಶ್ ರವಿಯನ್ನು ಕಾಪಡಲು ಸಾಧ್ಯವಾಗದೇ ಮುಳುಗುವ ಸ್ಥಿತಿಗೆ ತಲುಪಿದ್ದಾರೆ. ಈ ಇಬ್ಬರನ್ನು ಕಾಪಾಡಲು ಮಂಜು ಕಾಲುವೆಗೆ ಇಳಿದಿದ್ದಾರೆ. ಮೂವರು ನೀರಿನಲ್ಲಿ ಮುಳುಗುತ್ತಿದನ್ನು ಗಮನಿಸಿ ಮತ್ತೋರ್ವ ಸೀನು ಎಂಬವರು ನೀರಿಗಿಳಿಯಲು ಪ್ರಯತ್ನಿಸಿದಾಗ ಇತರರು ಹಿಡಿದುಕೊಂಡಿದ್ದಾರೆ ಹಾಗಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.
Advertisement
ಮೂವರು ನೀರಿನಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರು ಕೂಡ ಪಾರು ಮಾಡಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಅಧಿಕಾರಿ ಶಿವಣ್ಣ ಅವರ ನೇತೃತ್ವದ ತಂಡ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆ ಸಂಜೆ ನೀರಿನ ಹರಿವು ಜೋರಾಗಿದ್ದರಿಂದ ಮೃತ ದೇಹಗಳು ಪತ್ತೆ ಆಗಿರಲಿಲ್ಲ, ಬಳಿಕ ರಾತ್ರಿಯಾದ್ದರಿಂದಾಗಿ ಶೋಧಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪತ್ತೆಗೆ ನಡೆದ ಶೋಧ ಕಾರ್ಯದ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿದೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ
ಘಟನೆಯ ಬಳಿಕ ಹೆದರಿ ಮೂವರು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನಿಬ್ಬರು ಕೆಆರ್ ಪೇಟೆ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ನಿರಂಜನ್, ಉಪ ನಿರೀಕ್ಷಕ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.