ಮುಂಬೈ: ಇತ್ತೀಚೆಗಷ್ಟೇ ಕುದುರೆ ಸವಾರಿ ಮಾಡಿ ಫುಡ್ ಡೆಲವರಿ ಮಾಡಿದ್ದ ವ್ಯಕ್ತಿಯೊಬ್ಬ ಭಾರೀ ವೈರಲ್ ಆಗಿದ್ದ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿಯು ಫುಡ್ ಡೆಲಿವರಿ ಮಾಡಿದವನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಈ ವ್ಯಕ್ತಿ ಯಾರೆಂದು ಪತ್ತೆ ಆಗಿದ್ದಾನೆ.
ಈ ಬಗ್ಗೆ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಕುದುರೆ ಹಾಗೂ ಯುವಕರಿಬ್ಬರು ಪತ್ತೆ ಆಗಿದ್ದಾರೆ ಎನ್ನುವ ಮೂಲಕ ಸ್ಪಷ್ಟೀಕರಣ ನೀಡಿದೆ. ಕುದುರೆಯಲ್ಲಿದ್ದ ಯುವಕನ ಹೆಸರು ಸುಶಾಂತ್(17). ಆದರೆ ಈತ ಸ್ವಿಗ್ಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಈತನಿಗೆ ವಿಚಿತ್ರ ಕಾಯಿಲೆಯೊಂದಿದೆ. ಯಾವುದಾದರೂ ವಸ್ತುವನ್ನು ತೆಗೆದುಕೊಂಡರೆ ಅದನ್ನು ವಾಪಸ್ ಕೊಡುವುದನ್ನು ಮರೆತು ಬಿಡುತ್ತಾನೆ. ಇದೇ ರೀತಿಯೇ ಸ್ವಿಗ್ಗಿ ಬ್ಯಾಗ್‍ನ್ನು ತೆಗೆದುಕೊಂಡಿದ್ದ. ಆದರೆ ಇದೇ ರೀತಿ ಮರೆತಿದ್ದಾನೆ.
Advertisement
okay enough horsin’ around ???? pic.twitter.com/AMG6AFZ0ai
— Swiggy (@Swiggy) July 9, 2022
ಪ್ರಸ್ತುತ ಸುಶಾಂತ್ ಮದುವೆ ಕಾರ್ಯಕ್ರಮಗಳಿಗೆ ಕುದುರೆಯನ್ನು ಕಳುಹಿಸುವ ಏರ್ಪಾಟು ಮಾಡುವವನಾಗಿದ್ದಾನೆ. ಹಾಗೆಯೇ ಆ ಸ್ವಿಗ್ಗಿ ಬ್ಯಾಗ್‍ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಗಳಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಎಂದು ಕಂಪನಿ ತಿಳಿಸಿದೆ. ಜೊತೆಗೆ ವೀಡಿಯೋವನ್ನು ಚಿತ್ರೀಕರಿಸಿದ ಅವಿ ಹಾಗೂ ಆತನ ಸ್ನೇಹಿತರಿಗೆ ಬಹುಮಾನವನ್ನು ನೀಡಿದೆ. ಇದನ್ನೂ ಓದಿ: ಕಾರು ಹೊಳೆಗೆ ಬಿದ್ದ ಪ್ರಕರಣ- ನಾಪತ್ತೆಯಾಗಿದ್ದ ಇಬ್ಬರ ಮೃತದೇಹವೂ ಪತ್ತೆ
Advertisement
Advertisement
ಇತ್ತೀಚೆಗಷ್ಟೇ ಸ್ವಿಗ್ಗಿ ಕಂಪನಿಯ ಬ್ಯಾಗ್ ಹಾಕಿಕೊಂಡು ಕುದುರೆ ಸವಾರಿ ಮಾಡಿ ಫುಡ್ ಡೆಲಿವರಿ ಮಾಡಿದವನ ಸುಳಿವು ಕೊಟ್ಟವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಸ್ವಿಗ್ಗಿ ಕಂಪನಿ ಘೋಷಿಸಿತ್ತು. ಮುಂಬೈನಲ್ಲಿ ಮಳೆಯ ನಡುವೆಯೂ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಡೆಲಿವರಿ ಬಾಯ್ ಗುರುತಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಂಪನಿ ಮನವಿ ಮಾಡಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಆತನನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಕಂಪನಿ ಹೇಳಿತ್ತು. ಇದನ್ನೂ ಓದಿ: ಕುದುರೆ ಸವಾರಿ ಮಾಡಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ – ಉದ್ಯೋಗಿ ಸುಳಿವು ಕೊಟ್ಟರೆ ಬಹುಮಾನ ನೀಡ್ತೀವಿ ಎಂದ ಕಂಪನಿ