ಕಾರವಾರ: ಅಪಘಾತವಾಗಿ ನಿಂತಿದ್ದ ಲಾರಿಗೆ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ಸಾವನ್ನಪ್ಪಿದ್ದು, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನೆಡೆದಿದೆ.
ಮೃತರನ್ನು ಆಕಾಶ್(13), ಸೌಮ್ಯ(13), ಸುವರ್ಣ(65), ಪ್ರಭು(55), ರುದ್ರಪ್ಪ(70) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ದಾನಪ್ಪ ವೃದ್ರಪ್ಪ ಕೋರಿ, ರಾಜು ಗೋಪಾಲಗೌಡ ಪಾಟೀಲ್ ಹಾಗೂ 12 ವರ್ಷದ ಆದಿತ್ಯ ದಾನಪ್ಪ ಕೋರಿ ಎಂದು ಗುರುತಿಸಲಾಗಿದ್ದು, ಓರ್ವನ ಗುರುತು ತಿಳಿದುಬರಬೇಕಿದೆ.
ವಿಜಯಪುರ ಜಿಲ್ಲೆಯ ಜಮನಾಳ ಗ್ರಾಮದಿಂದ ಮಕ್ಕಳು ಸೇರಿದಂತೆ ಒಂಭತ್ತು ಜನರು ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುತಿದ್ದಾಗ, ಅಂಕೋಲದ ಹೊನ್ನಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.
ಈ ಸಂಬಂಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳುಗಳನ್ನ ಕಾರವಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.