ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾಗಾಗಿ ರಾಧಿಕಾ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಕೆಲ ತಿಂಗಳ ಹಿಂದೆ ‘ದಮಯಂತಿ’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈ ಚಿತ್ರದ ಲುಕ್ ಈಗ ಬಿಡುಗಡೆಯಾಗಿದ್ದು, ರಾಧಿಕಾ ಹಿಂದೆಂದೂ ಕಂಡಿರದ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ರಾಧಿಕಾ ಅವರ ಈ ಲುಕ್ ನೋಡಿ ಆಶ್ಚರ್ಯಪಡುತ್ತಿದ್ದಾರೆ.
Advertisement
Advertisement
ದಮಯಂತಿ ಚಿತ್ರ ಮಹಿಳಾ ಪ್ರಧಾನ ಚಿತ್ರ ಎಂದು ಹೇಳಲಾಗುತ್ತಿದೆ. ತೆಲುಗುನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ ‘ಭಾಗಮತಿ’ ಹಾಗೂ ‘ಅರುಂಧತಿ’ ಚಿತ್ರದ ರೀತಿಯಲ್ಲೇ ದಮಯಂತಿ ಚಿತ್ರ ಇರಲಿದೆ. ಸದ್ಯ ಈ ಚಿತ್ರ ಕನ್ನಡದಲ್ಲಿ ಚಿತ್ರೀಕರಣ ಆದ ನಂತರ ತೆಲುಗು ಹಾಗೂ ತಮಿಳಿನಲ್ಲೂ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ.
Advertisement
Advertisement
ನಾಯಕ ಹಾಗೂ ನಿರ್ಮಾಪಕರಾಗಿರುವ ನವರಸನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ರಾಧಿಕಾ ದಮಯಂತಿ ಚಿತ್ರದ ಜೊತೆ ಅರ್ಜುನ್ ಸರ್ಜಾ ಅವರ ಜೊತೆ ‘ಕಾಂಟ್ರಾಕ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಜೊತೆ ‘ರಾಜೇಂದ್ರ ಪೊನ್ನಪ್ಪ’ ಹಾಗೂ ರಮೇಶ್ ಅರವಿಂದ್ ಜೊತೆ ‘ಭೈರಾ ದೇವಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv