ತಿರುವನಂತಪುರಂ: ಖಾಸಗಿ ಕಂಪನಿಯ ಬಾಸ್ ತನ್ನ ನಿಷ್ಠಾವಂತ ಸಿಬ್ಬಂದಿಗೆ ಮರ್ಸಿಡಿಸ್ ಬೆಂಜ್ ಕಾರನ್ನು ಗಿಫ್ಟ್ ಮಾಡಿದ್ದು, ಕಾರು ನೋಡಿ ಉದ್ಯಮಿ ಫುಲ್ ಖುಷ್ ಆಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಕೇರಳದ ಸಿಆರ್ ಅನೀಶ್ ಅವರಿಗೆ ಖಾಸಗಿ ಕಂಪನಿ ಮಾಲೀಕ ಎಕೆ ಶಾಜಿ ಅವರು Mercedes-Benz GLA Class 220 d ಕಾರನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಗಿಫ್ಟ್ ನೋಡಿದ ಅನೀಶ್ ಆಶ್ಚರ್ಯಗೊಂಡಿದ್ದಾರೆ. ಈ ಕುರಿತು ಶಾಜಿ ಅವರು ಇನ್‍ಸ್ಟಾಗ್ರಾಮ್ ನಲ್ಲಿ, ಆತ್ಮೀಯ ಅನಿ, ಕಳೆದ 22 ವರ್ಷಗಳಿಂದ ನೀವು ನನಗೆ ಬಲವಾದ ಸ್ತಂಭವಾಗಿ ಇದ್ದೀರಿ. ನಿಮ್ಮ ನಾನು ಕೊಟ್ಟ ಈ ಉಡುಗೊರೆಯನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ ಎಂದು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ
View this post on Instagram
ಅನೀಶ್ ಅವರು ಕಳೆದ 22 ವರ್ಷಗಳಿಂದ ಉದ್ಯಮಿ ಎಕೆ ಶಾಜಿ ಅವರೊಂದಿಗೆ ಕಂಪನಿಯ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಿಷ್ಠೆಗೆ ಧನ್ಯವಾದ ಅರ್ಪಿಸಲು, ಶಾಜಿ ಅವರು ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ.
View this post on Instagram
ನಾನು ಮಾಲೀಕನಲ್ಲ, ಅವನು ಉದ್ಯೋಗಿ ಅಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ಇದೊಂದು ಹೆಮ್ಮೆಯ ಕ್ಷಣ. ಕಳೆದ 22 ವರ್ಷಗಳಿಂದ ಅನಿ ನನ್ನೊಂದಿಗಿದ್ದಾರೆ. ಈ ವರ್ಷ ನಾವು ನಮ್ಮ ಪಾಲುದಾರರಿಗೆ ಕಾರುಗಳನ್ನು ನೀಡಬಹುದೆಂದು ಆಶಿಸೋಣ ಎಂದು ಹೇಳಿ ಈ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಇದನ್ನು ನೋಡಿ ಅನೀಶ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಯನ್ನೂ ಬಿಡದ ಕಾಮುಕ – ಸಿಸಿಟಿವಿಯಲ್ಲಿ ರೆಕಾರ್ಡ್!
ಉಡುಗೊರೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅನೀಶ್, ಇದಕ್ಕೆಲ್ಲಾ ನಿಮ್ಮೆಲ್ಲರ ಬೆಂಬಲವೇ ಕಾರಣ. ಭವಿಷ್ಯದಲ್ಲಿಯೂ ನೀವು ನನ್ನೊಂದಿಗೆ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಶಾಜಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.