ಪಪ್ಪಾಯಿ ಹಣ್ಣು ಯಾವ ಸೀಸನ್‌ನಲ್ಲೂ ಸಿಗುತ್ತದೆ. ಹೆಚ್ಚಿನವರು ಇದನ್ನು ಫ್ರೂಟ್ ಸಲಾಡ್ ಅಥವಾ ಜ್ಯೂಸ್ ಆಗಿ ಸೇವಿಸಲು ಇಷ್ಟಪಡುತ್ತಾರೆ. ಆದರೆ ಹೆಚ್ಚು ಮಾಗಿದ ಹಣ್ಣನ್ನು ಹಲವರು ತಿನ್ನಲು ಬಯಸುವುದಿಲ್ಲ. ಹೀಗಿರುವಾಗ ನೀವೊಮ್ಮೆ ಪಪ್ಪಾಯಿಯ ಹಲ್ವಾ (Papaya Halwa) ಟ್ರೈ ಮಾಡಿ ನೋಡಿ. ಸಿಹಿಯಾದ ಪಪ್ಪಾಯಿ ಹಲ್ವಾ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಮಾಗಿದ ಪಪ್ಪಾಯಿ ಹಣ್ಣಿನ ಪ್ಯೂರಿ – 2 ಕಪ್
ಸಕ್ಕರೆ – ಅರ್ಧ ಕಪ್
ತುಪ್ಪ – 2 ಟೀಸ್ಪೂನ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಗೋಡಂಬಿ ಹಾಗೂ ಒಣ ದ್ರಾಕ್ಷಿ – ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನೂ ಓದಿ: ಯಮ್ಮಿ ಯಮ್ಮಿ ಚಿಕ್ಕು ಖೀರ್ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಪಪ್ಪಾಯಿ ಪ್ಯೂರಿ ತಯಾರಿಸಲು ನೀವು ಹಣ್ಣಿನ ಸಿಪ್ಪೆ ಬಿಡಿಸಿ, ಕತ್ತರಿಸಿ, ಒಳಭಾಗದ ಬೀಜಗಳನ್ನು ಬೇರ್ಪಡಿಸಿ, ಹೋಳುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಒಂದು ಕಡಾಯಿ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಒಂದೊಂದಾಗಿ ಹುರಿಯಿರಿ. ಒಣ ಹಣ್ಣುಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಂತೆ ತುಪ್ಪದಿಂದ ತೆಗೆದು ಪಕ್ಕಕ್ಕಿಡಿ.
* ಈಗ ಕಡಾಯಿಗೆ ಪಪ್ಪಾಯಿ ಪ್ಯೂರಿ ಹಾಗೂ ಸಕ್ಕರೆ ಹಾಕಿ, ಸಕ್ಕರೆ ಕರಗುವವರೆಗೆ ಪ್ಯೂರಿಯನ್ನು ಚೆನ್ನಾಗಿ ಮಿಶ್ರಣ ಮಾಡುತ್ತಾ ಬೇಯಿಸಿಕೊಳ್ಳಿ.
* 2-3 ನಿಮಿಷಗಳ ಬಳಿಕ ಮಿಶ್ರಣಕ್ಕೆ ಇನ್ನಷ್ಟು ತುಪ್ಪ ಸೇರಿಸಿ, ಉರಿಯನ್ನು ಮಧ್ಯಮದಲ್ಲಿಟ್ಟುಕೊಂಡು ಆಗಾಗ ಮಗುಚುತ್ತಿರಿ.
* 8-10 ನಿಮಿಷಗಳಲ್ಲಿ ಮಿಶ್ರಣ ದಪ್ಪವಾಗುತ್ತಾ ಬರುತ್ತದೆ. ಬಳಿಕ ಸ್ಟೌ ಅನ್ನು ಆಫ್ ಮಾಡಿ.
* ಈಗ ಹುರಿದಿಟ್ಟುಕೊಂಡ ಒಣ ಹಣ್ಣು ಹಾಗೂ ಏಲಕ್ಕಿ ಪುಡಿಯನ್ನು ಹಲ್ವಾಗೆ ಹಾಕಿ ಮಿಶ್ರಣ ಮಾಡಿ.
* ಇದೀಗ ಪಪ್ಪಾಯಿ ಹಲ್ವಾ ತಯಾರಾಗಿದ್ದು, ಬಿಸಿ ಅಥವಾ ತಣ್ಣಗಾದಮೇಲೂ ಇದನ್ನು ಸವಿಯಬಹುದು. ಇದನ್ನೂ ಓದಿ: ಸಿಂಪಲ್ ಆಗಿ ಮಾಡಿ ಬ್ರೆಡ್ ಹಲ್ವಾ