ಅಪ್ಪಂ ಅಥವಾ ಮುಳ್ಕ ಎನ್ನಲಾಗುವ ತಿಂಡಿಯನ್ನು ಸಿಹಿ ಅಥವಾ ಖಾರವಾಗಿಯೂ ತಯಾರಿಸಬಹುದು. ಸಾಮಾನ್ಯವಾಗಿ ಇದನ್ನು ಗೋಧಿ ಹಿಟ್ಟು ಹಾಗೂ ಆಯಾಯ ಋತುಗಳಲ್ಲಿ ಬೆಳೆಯುವ ಹಣ್ಣುಗಳಿಂದ ಮಾಡಲಾಗುತ್ತದೆ. ಬಾಳೆಹಣ್ಣಿನಿಂದ ಮಾಡಲಾಗುವ ಅಪ್ಪಂ ಯಾವ ಋತುವಿನಲ್ಲೂ ಮಾಡಿ ಸವಿಯಬಹುದು. ಬಾಳೆಹಣ್ಣಿನ ಅಪ್ಪಂ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು – 3
ಬೆಲ್ಲ – ಅರ್ಧ ಕಪ್
ಗೋಧಿ ಹಿಟ್ಟು – 1 ಕಪ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಚಿಟಿಕೆ
ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ದಿಢೀರ್ ಅಂತ ತಯಾರಿಸಿ ಜೋಳದ ದೋಸೆ
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣುಗಳ ಸಿಪ್ಪೆ ತೆಗೆದು ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಬಳಸಿದರೆ ಉತ್ತಮ.
* ಅವುಗಳನ್ನು ಚೆನ್ನಾಗಿ ಕಿವುಚಿ(ಮ್ಯಾಶ್ ಮಾಡಿ)
* ಅದಕ್ಕೆ ಬೆಲ್ಲ ಸೇರಿಸಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಗೋಧಿ ಹಿಟ್ಟು, ಏಲಕ್ಕಿ ಪುಡಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಮಿಕ್ಸ್ ಮಾಡಿ.
* ದಪ್ಪನೆಯ ಬ್ಯಾಟರ್‌ನ ಸ್ಥಿರತೆಯನ್ನು ರೂಪಿಸಲು ಸ್ವಲ್ಪ ನೀರನ್ನು ಬಳಸಬಹುದು.
* ಈಗ ನೀರಿನಲ್ಲಿ ನಿಮ್ಮ ಕೈಯನ್ನು ಅದ್ದಿ, ಬ್ಯಾಟರ್ ಅನ್ನು ಸ್ವಲ್ಪ ಸ್ವಲ್ಪವೇ ಬಿಸಿ ಎಣ್ಣೆಗೆ ಬಿಡಲು ಪ್ರಾರಂಭಿಸಿ.
* ಜ್ವಾಲೆಯನ್ನು ಮಧ್ಯಮದಲ್ಲಿಟ್ಟು, ಹಿಟ್ಟು ಡಾರ್ಕ್ ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
* ಈಗ ಅಪ್ಪಂ ಅನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಸಿಹಿಯಾದ ಬಾಳೆಹಣ್ಣಿನ ಅಪ್ಪಂ ತಯಾರಾಗಿದ್ದು, ಇದನ್ನು ಮಕ್ಕಳು ತುಂಬಾನೇ ಇಷ್ಟ ಪಟ್ಟು ಸವಿಯುತ್ತಾರೆ. ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ