ಸ್ಟಾಕ್‌ಹೋಮ್: ಸ್ವಿಡನ್‌ನ ಶಾಲಾ ಆವರಣದಲ್ಲಿ ದುಷ್ಕರ್ಮಿ ಗುಂಡಿನ ದಾಳಿ (Sweden shooting) ನಡೆಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಲವು ಜನರನ್ನು ರಕ್ಷಿಸಿ ಗುಂಡಿನ ದಾಳಿ ನಡೆಸಿದ್ದವನನ್ನ ಹತ್ಯೆಗೈದಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸ್ಟಾಕ್‌ಹೋಮ್‌ನಿಂದ 200 ಕಿ.ಮೀ ದೂರ ಇರುವ ಒರೆಟ್ರೊ ನಗರದ ಹೊರವಲಯದಲ್ಲಿನ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಈ ಗುಂಡಿನ ದಾಳಿ ನಡೆದಿದೆ. ಈ ವೇಳೆ ಸ್ವಿಡನ್‌ನಲ್ಲಿ ರಾಷ್ಟ್ರೀಯ ಪರೀಕ್ಷೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಸ್ವಿಡನ್ ಇತಿಹಾಸದಲ್ಲೇ ಅತಿದೊಡ್ಡ ಗುಂಡಿನ ದಾಳಿ ನಡೆದಿದೆ. ಘೋರ ಹಿಂಸೆಯ ಮೂಲಕ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಇದರಿಂದ ನಮಗೆ ದೊಡ್ಡ ಆಘಾತವಾಗಿದೆ. ಗುಂಡಿನ ದಾಳಿ ನಡೆದ ಸ್ಥಳವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಸ್ವಿಡನ್ ಪ್ರಧಾನ ಮಂತ್ರಿ ಯೂಇಫ್ ಕ್ರಿಸ್ಟನ್‌ಸನ್ ಹೇಳಿದ್ದಾರೆ
ಅಲ್ಲದೇ ಸದ್ಯಕ್ಕೆ ಸಾವಿನ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮೃತರಿಗಾಗಿ ಇಡೀ ಅವರಣವನ್ನು ಶೋಧಿಸಲಾಗುತ್ತಿದೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.