ನವದೆಹಲಿ: ಸ್ವಾತಿ ಮಲಿವಾಲ್ (Swati Maliwal) ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯವು ನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಬಿಭವ್ (Bibhav Kumar) ಪರ ವಕೀಲರು ಸಿಸಿಟಿವಿ ದೃಶ್ಯಾವಳಿ ಮತ್ತು ಡಿವಿಆರ್‌ಗಳನ್ನು ಸಂಗ್ರಹಿಸಿ ಸಂರಕ್ಷಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಿಸಿಟಿವಿಗಳು ನನ್ನ ಪ್ರಕರಣದ ಸತ್ಯಾಸತ್ಯತೆ ಸಾಬೀತುಪಡಿಸುತ್ತವೆ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸ್ವಾತಿ ಮಲಿವಾಲ್
Advertisement
Advertisement
ಸ್ವಾತಿ ಮಲಿವಾಲ್ ಅವರು ಸಿಎಂ ಸಿವಿಲ್ ಲೈನ್ಸ್ ನಿವಾಸಕ್ಕೆ ಅನಧಿಕೃತ ಪ್ರವೇಶ ಮಾಡಿದ್ದಲ್ಲದೇ ನಿಂದಿಸಿದ್ದಾರೆ ಎಂದು ಆರೋಪಿಸಿ ಬಿಭವ್ ಕುಮಾರ್ ಕೂಡ ಪ್ರತಿದೂರು ದಾಖಲಿಸಿದ್ದರು. ದೂರಿನ ಬೆನ್ನಲ್ಲೇ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
Advertisement
ತಮ್ಮ ದೂರಿನಲ್ಲಿ ಕುಮಾರ್ ಅವರು ಮಲಿವಾಲ್ ವಿರುದ್ಧ ಅನಧಿಕೃತ ಪ್ರವೇಶ, ಮೌಖಿಕ ನಿಂದನೆ ಮತ್ತು ಬೆದರಿಕೆಗಳ ಆರೋಪ ಹೊರಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಕೈವಾಡವೂ ಇದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗಾಗಿ ನಾನು, ನನ್ನ ಪೋಷಕರು, ಹೆಂಡತಿ ಕಾಯುತ್ತಿದ್ದೇವೆ: ಕೇಜ್ರಿವಾಲ್ ಪೋಸ್ಟ್
Advertisement
ಸಿಎಂ ಕೇಜ್ರಿವಾಲ್ ಆಪ್ತನ ವಿರುದ್ಧ ಸ್ವಾತಿ ಮಲಿವಾಲ್ ಅವರು ಮೇ 13 ರಂದು ದೂರು ದಾಖಲಿಸಿದ್ದರು. ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿದ್ದರು.