ನವದೆಹಲಿ: ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ಗೆ (Bibhav Kumar) ಜಾಮೀನು ನೀಡಲು ತೀಸ್ ಹಜಾರಿ ಕೋರ್ಟ್ ನಿರಾಕರಿಸಿದೆ. ಎರಡೂ ಕಡೆಯ ವಾದ ಆಲಿಸಿದ ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಬಿಭವ್ ಜಾಮೀನು (Bail) ಅರ್ಜಿಯನ್ನು ತಿರಸ್ಕರಿಸಿದರು.
ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್, ಸಂಸದೆ ಸ್ವಾತಿ ಮಲಿವಾಲ್ ಸಮಯ ಪಡೆಯದೇ ಕೇಜ್ರಿವಾಲ್ ಅವರ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ವೇಳೆ ಬಿಭವ್ ಕುಮಾರ್ ಸಿಎಂ ಮನೆಯೊಳಗೆ ಇರಲಿಲ್ಲ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಯಾರಾದಾರೂ ಹೀಗೆ ಪ್ರವೇಶಿಸಬಹುದೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ
Advertisement
Advertisement
Advertisement
ಭೇಟಿ ಸಮಯ ನಿಗಧಿಯಾಗದ ಹಿನ್ನೆಲೆ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಕಾಯುವ ಕೊಠಡಿಯಲ್ಲಿ ಕೂರಿಸಲು ಮುಂದಾದರು. ಬಳಿಕ ಬಿಭವ್ ಕುಮಾರ್ ಅವರೊಂದಿಗೆ ಮಾತನಾಡಲು ಸೆಕ್ಯೂರಿಟಿಯನ್ನು ಹೇಳಿದರು ಎಂದು ರಕ್ಷಣಾ ವಕೀಲರು ಹೇಳಿದರು. ಅವರ ಮೇಲೆ ಹಲ್ಲೆಯಾಗಿದೆ ಎನ್ನಲಾಗುತ್ತಿದೆ. ಆದರೆ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಮುಂಬೈ ತಾಜ್ ಹೋಟೆಲ್, ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್ ಪತ್ತೆ!
Advertisement
ಘಟನೆ ನಡೆದ ಸ್ಥಳವನ್ನು ಒಮ್ಮೆ ನೋಡಿ. ಇಂತಹ ಘಟನೆ ಅಲ್ಲಿ ಹೇಗೆ ನಡೆಯುತ್ತದೆ? ದೇಹದ ಪ್ರಮುಖ ಭಾಗದಲ್ಲಿ ಯಾವುದೇ ಘೋರವಾದ ಗಾಯವಿಲ್ಲ. ಗಾಯಗಳು ಸ್ವಯಂ ಪ್ರೇರಿತವಾಗಬಹುದು. ಮಲಿವಾಲ್ ಮಾಡಿದ ಎಲ್ಲಾ ಆರೋಪಗಳು ಪೂರ್ವ ಯೋಜಿತ ಮತ್ತು ಅವಳ ಕಥೆಗೆ ಸರಿಹೊಂದುವಂತೆ ಟೈಲರ್-ಮೇಡ್. ಈ ಸಂಪೂರ್ಣ ಎಫ್‌ಐಆರ್ ನಂತರದ ಚಿಂತನೆಯ ಫಲಿತಾಂಶವಾಗಿದೆ. ನಾನು ಜಾಮೀನು ಮಾತ್ರ ಬಯಸುತ್ತಿದ್ದೇನೆ, ಖುಲಾಸೆಗೊಳಿಸುವುದಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆಗೆ ಟಾಸ್ಕ್ ಫೋರ್ಸ್ ರಚನೆ
ಸ್ವಾತಿ ಮಲಿವಾಲ್ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಮತ್ತು ಪ್ರಕರಣದ ಮೇಲೆ ಪರಿಣಾಮ ಬೀರಬಹುದು. ತನಿಖೆ ನಡೆಯುತ್ತಿರುವ ಹೊತ್ತಲ್ಲಿ ಪ್ರಭಾವಿ ಸ್ಥಾನದಲ್ಲಿರುವ ಆರೋಪಿ ತನಿಖೆಯ ದಿಕ್ಕು ತಪ್ಪಿಸಬಹುದು ಎಂದು ಹೇಳಿದರು. ವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತು. ಈ ಹಿನ್ನೆಲೆ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ರಾಹುಲ್ ಪ್ರಚಾರದ ವೇಳೆ ಕುಸಿದ ವೇದಿಕೆ