ಲಕ್ನೋ: ಬಸ್ಸಲ್ಲಿ ಜನ ತುಂಬಿ ತುಳುಕುತ್ತಿದ್ದರೂ, ಅಪಾಯವಿದೆ ಎಂದು ಗೊತ್ತಿದ್ದರೂ ಟಾಪ್, ಹಿಂಬದಿಯ ಏಣಿಯ ಮೇಲೆ, ಬಾಗಿಲ ಫುಟ್ ರೆಸ್ಟ್ ಮೇಲೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿದ್ದಕ್ಕೆ ಬಸ್ ಮಾಲೀಕ, ಚಾಲಕನ ಮೇಲೆ ಎಫ್‍ಐಆರ್ ದಾಖಲಾಗಿದೆ.
ವಸ್ತುಗಳನ್ನು ತುರುಕಿ ವಾಹನದಲ್ಲಿ ಲೋಡ್ ಮಾಡುವ ರೀತಿ ವಿದ್ಯಾರ್ಥಿಗಳು ಬಸ್ ಮೇಲೆ, ಬಾಗಿಲ ಬಳಿ ನೇತಾಡಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ಪ್ರತಿ ನಿತ್ಯ ಮುಜಾಫರ್‌ನಗರದಿಂದ ಮೀರಾಪುರ ಮಾರ್ಗವಾಗಿ ಹೋಗುವ ಬಸ್ಸಿನಲ್ಲಿ ಹೀಗೆ ವಿದ್ಯಾರ್ಥಿಗಳು ನೇತಾಡುತ್ತಾ ಹೋಗಿದ್ದಾರೆ. ಪ್ರತಿನಿತ್ಯ ಈ ಭಾಗದಲ್ಲಿ ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಚಾಲಕ, ನಿರ್ವಾಹಕ ಹೋಗುತ್ತಾರೆ.
Advertisement
Advertisement
ಆದರೆ ಶುಕ್ರವಾರದಂದು ಹೀಗೆ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಬಸ್ ಸಾಗುತ್ತಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನದ್ದಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜವಾಬ್ದಾರಿಯಿಲ್ಲದೆ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಬಸ್ಸಿನಲ್ಲಿ ತುಂಬಿಸಿಕೊಂಡು ಅವರ ಜೀವದೊಂದಿಗೆ ಚೆಲ್ಲಾಟ ಆಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಈ ವಿಡಿಯೋಗೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿ, ಪೊಲೀಸರು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬಂದಿತ್ತು. ಈ ವಿಡಿಯೋ ನೋಡಿ ಎಚ್ಚೆತ್ತ ಪೊಲೀಸರು ಕೊನೆಗೆ ಆ ಬಸ್ ಯಾವುದು? ಯಾವ ಮಾರ್ಗದಿಂದ ಸಂಚರಿಸುತ್ತೆ? ಹೀಗೆ ಎಲ್ಲಾ ಮಾಹಿತಿಗಳನ್ನು ಪತ್ತೆ ಮಾಡಿ, ಬಸ್ ಮಾಲೀಕ ಹಾಗೂ ಚಾಲಕನ ಮೇಲೆ ಕೇಸ್ ಹಾಕಿದ್ದಾರೆ.
Advertisement
WATCH: Swarm of school kids cling to a bus in UP's Muzaffarnagar #UttarPradesh pic.twitter.com/Ho7OsiXRtg
— TOI Bareilly (@TOIBareilly) September 14, 2019
ಇನ್ನಾದರೂ ಬಸ್ ಮಾಲೀಕರು ಹಾಗೂ ಚಾಲಕರು ಎಚ್ಚೆತ್ತುಕೊಂಡು ದುಡ್ಡಿನ ಆಸೆಗೆ ಹೀಗೆ ಪ್ರಯಾಣಿಕರನ್ನು ಬೇಕಾಬಿಟ್ಟಿ ಹತ್ತಿಸಿಕೊಳ್ಳುವುದನ್ನು ಬಿಡಬೇಕು. ಈ ರೀತಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರ ಜೀವಕ್ಕೆ ಕುತ್ತು ಬಾರದಂತೆ ನೋಡಿಕೊಂಡು ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.