Connect with us

Latest

ಮುಸ್ಲಿಂ ಸಮುದಾಯದ ಪರ ನಿಂತ ಸುಷ್ಮಾ ಸ್ವರಾಜ್ ಟ್ರೋಲ್

Published

on

– ಪಾಸ್ ಪೋರ್ಟ್ ನಿಯಮಗಳಲ್ಲಿ `ಕಾಂತ್ರಿಕಾರಿ’ ಬದಲಾವಣೆ

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ಪರ ನಿಂತಿದ್ದ ಕಾರಣ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಒಳಗಾಗಿದ್ದರು. ಆದರೆ ಸದ್ಯ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಆ್ಯಪ್ ಬಿಡುಗಡೆಗೊಳಿಸಿ ಕಾಂತ್ರಿಕಾರಿ ಬದಲಾವಣೆಗೆ ಕಾರಣರಾಗಿದ್ದಾರೆ.

ಪಾಸ್ ಪೋರ್ಟ್ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಸ್ ಪೋರ್ಟ್ ಪಡೆಯಲು ಯಾವುದೇ ಕಚೇರಿಯಲ್ಲೂ ವಿವಾಹ ಪ್ರಮಾಣ ಪತ್ರ ತೋರಿಸಬೇಕಾದ ಅಗತ್ಯವಿಲ್ಲ. ಅಲ್ಲದೇ ಭಾರತದ ಯಾವುದೇ ಮೂಲೆಯಿಂದಲೂ ಸಹ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎಂದು  ತಿಳಿಸಿದ್ದಾರೆ. ಅಲ್ಲದೇ ವಿಚ್ಛೇದಿತ ಮಹಿಳೆಯರು ತಮ್ಮ ಮಾಜಿ ಪತಿ ಮತ್ತು ಅವರ ಮಕ್ಕಳ ಹೆಸರನ್ನು ತುಂಬಬೇಕಾದ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಪಪಡಿಸಿದೆ.

ಈ ಬದಲಾವಣೆಯನ್ನು ಪಾಸ್ ಪೋರ್ಟ್ ನಿಯಮಗಳಲ್ಲಿ ಮಾಡಲಾದ ಕಾಂತ್ರಿಕಾರಿ ಬದಲಾವಣೆ ಎಂದು ಕರೆದಿರುವ ಸುಷ್ಮಾ ಸ್ವರಾಜ್ ಅವರು, ವಿಚ್ಚೇದಿತ ಪುರುಷ ಹಾಗೂ ಆತನೊಂದಿಗಿರುವ ಮಕ್ಕಳ ಹೆಸರನ್ನು ನಮೂದಿಸಬೇಕೆ ಎಂಬ ಬಗ್ಗೆ ಕೆಲ ವಿಚ್ಚೇದಿತ ಮಹಿಳೆಯರು ದೂರು ನೀಡಿದ್ದರು. ಆದ್ದರಿಂದ ನಿಯಮವನ್ನು ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ 260 ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಸ್ಥಾಪನೆ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ 212 ಕೇಂದ್ರಗಳು ಕಾರ್ಯಾರಂಭ ಮಾಡಿದೆ. ಇನ್ನು 38 ಹೆಚ್ಚುವರಿ ಕೇಂದ್ರಗಳಲ್ಲಿ ಎರಡು ಕೇಂದ್ರಗಳು ಆಂರಭಿಸುವ ಹಂತದಲ್ಲಿದೆ. ದೇಶದ ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ 260 ಕೇಂದ್ರಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಲಖನೌದಲ್ಲಿ ಅಂತರ್ ಧರ್ಮೀಯ ದಂಪತಿಗೆ ಕಿರುಕುಳ ನೀಡಿದ್ದ ಪಾಸ್‍ಪೋರ್ಟ್ ಅಧಿಕಾರಿಯನ್ನು ವರ್ಗಾವಣೆ ಮಾಡಿ, ಅಧಿಕಾರಿಯ ವಿರುದ್ಧ ಕೈಗೊಂಡ ಬಗ್ಗೆ ಕೆಲವರು ಟ್ರೋಲ್ ಮಾಡಿದ್ದರು. ಇಸ್ಲಾಮಿಕ್ ಕಿಡ್ನಿ ಪಡೆದಿದ್ದರ ಫಲ ಎಂದೆಲ್ಲಾ ಕಮೆಂಟ್ ಮಾಡಿದ್ದರು. ಈ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ಸುಷ್ಮಾ ಅವರು ಅಂತಹ ಟ್ರೋಲ್ ಲೈಕ್ ಮಾಡಿ, ಕೆಲವರ ಟ್ವೀಟ್ ನಿಂದ ದೊಡ್ಡ ಗೌರವವೇ ಸಿಕ್ಕಿದೆ. ಅದನ್ನು ನಾನು ನಿಮ್ಮೊಂದಿಗೆ ಶೇರ್ ಮಾಡಿದ್ದೇನೆ. ಅದನ್ನು ನಾನು ಇಷ್ಟಪಟ್ಟಿದ್ದೇನೆ ಎಂದು ಟಾಂಗ್ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *