ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ನಟಿಯ ಪೋಸ್ಟ್ ವೈರಲ್ ಆಗಿದೆ. ಸಹೋದರ ಎಂದು ಕರೆದವನ ಜೊತೆ ಸ್ವರಾ ಮದುವೆಯಾಗಿರುವುದರ ಬಗ್ಗೆ ನಟಿಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ನಟಿ ಸ್ವರಾ ಭಾಸಕರ್ ಸದ್ದಿಲ್ಲದೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಪೊಲಿಟಿಕಲ್ ಲೀಡರ್ ಫಹಾದ್ ಜೊತೆ ನಟಿ ಸ್ವರಾ ಅವರು ವಿಶೇಷ ಕಾಯ್ದೆಯಡಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ವರ್ಷ ಜ.6ರಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ನಟಿಯ ಹಳೆಯ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
Advertisement
View this post on Instagram
Advertisement
ಸ್ವರಾ ಪತಿಯನ್ನು ಅಣ್ಣ ಎಂದು ಕರೆದಿದ್ದ ಹಳೆಯ ಟ್ವೀಟ್ ವೈರಲ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು. ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದರು. ಈ ಹಳೆಯ ಟ್ವೀಟ್ (Tweet) ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
जन्मदिन मुबारक फ़हाद मियाँ! भाई का कॉन्फ़िडेंस बरकरार रहे 🙂 @FahadZirarAhmad
खुश रहो, आबाद रहो.. उम्र हो रही है अब शादी कर लो! ????????????????????????
Have a great birthday & a fantastic year dost! ✨ pic.twitter.com/3Rzak1MuQB
— Swara Bhasker (@ReallySwara) February 2, 2023
ಹಳೆಯ ಪೋಸ್ಟ್ಗೆ ಸಹೋದರ ಮತ್ತು ಸಹೋದರಿ ಇಬ್ಬರಿಗೂ ಸಂತೋಷದ ವೈವಾಹಿಕ ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕೇವಲ 15 ದಿನಗಳಲ್ಲಿ ಅಣ್ಣ ಪತಿಯಾಗಿದ್ದಾನೆ ಎಂದು ಹೇಳಿದ್ದಾರೆ. ಒಮ್ಮೆ ಅಣ್ಣ ಮತ್ತೊಮ್ಮ ಪ್ರೇಮಿ ಎಂದು ಮತ್ತೋರ್ವ ಹೇಳಿದ್ದಾರೆ. ಸಹೋದರನಾಗಿದ್ದವರು ಪತಿ ಹೇಗೆ ಆದರು ಎಂದು ಸ್ವರಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನೂ ಕಳೆದ 2019ರಿಂದ ಫಹಾದ್ ಮತ್ತು ಸ್ವರಾ ಡೇಟಿಂಗ್ ಮಾಡ್ತಿದ್ದರು. ಈ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡದೇ, ಹಲವು ವರ್ಷಗಳ ಪ್ರೀತಿಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಅಧ್ಯಕ್ಷರಾಗಿ ಫಹಾದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k