ಜಕರ್ತಾ: ನನ್ನ ಕಾಲಿಗೆ ಸರಿ ಹೋಗುವ ಶೂಗಳನ್ನು ತಯಾರಿಸಿ ಕೊಡಿ’ ಎಂದು ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತ ಸ್ವಪ್ನಾ ಬರ್ಮನ್ ಕೇಳಿಕೊಂಡಿದ್ದಾರೆ.
ಏಷ್ಯನ್ ಗೇಮ್ಸ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತ ಮಹಿಳೆ ಐತಿಹಾಸಿಕ ದಾಖಲೆಯನ್ನು ಬರೆದಿರುವ ಸ್ವಪ್ನಾ, ಸಾಮಾನ್ಯ ಶೂ, ಸ್ಪೈಕ್‍ಗಳನ್ನು ಹಾಕಿದರೆ ನನಗೆ ಭಾರೀ ನೋವಾಗುತ್ತದೆ. ನನಗೆ ಯಾರಾದರೂ ಶೂ ತಯಾರಿಸಿ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ.
Advertisement
Advertisement
ಸ್ವಪ್ನಾ ನರ್ಮನ್ ಯಾರು?
ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್ ಅವರಿಗೆ ಹುಟ್ಟುತ್ತಲೇ ತಮ್ಮ ಎರಡೂ ಕೈ ಹಾಗೂ ಎರಡೂ ಕಾಲುಗಳಲ್ಲಿ ತಲಾ ಆರು ಬೆರಳುಗಳನ್ನು ಹೊಂದಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಸ್ವಪ್ನಾರ ತಂದೆ ರಿಕ್ಷಾ ಚಾಲಕ. ಆದರೆ ಅವರು ಕೂಡಾ ಅನಾರೋಗ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ತಮ್ಮ ಬದುಕಿನಲ್ಲಿ ಎರಡನೇ ಬಾರಿ ಏಷ್ಯಾನ್ ಗೇಮ್ಸ್ ನಲ್ಲಿ ಭಾಗವಹಿಸುವುದು ಅನುಮಾನವಿತ್ತು.
Advertisement
ಸಮಸ್ಯೆಗಳನ್ನು ಎದುರಿಸಿದ ಸ್ವಪ್ನಾ ಏಷ್ಯಾನ್ ಗೇಮ್ಸ್‍ಗೆ ಆಯ್ಕೆಯಾಗಿದ್ದರು. ಆದರೆ ಅವರ ಕಾಲಿಗೆ ಯಾವುದೇ ಕಂಪೆಯ ಶೂಗಳು ಸೂಕ್ತವಾಗುತ್ತಿಲ್ಲ. ಪ್ರತಿ ಟೂರ್ನಿಯಲ್ಲಿ ಸ್ಪರ್ಧಿಸುವ ವೇಳೆ ವಿಶೇಷ ಶೂಗಳನ್ನು ಆಯ್ಕೆ ಮಾಡುವುದೇ ದೊಡ್ಡ ಸಮಸ್ಯೆ ಆಗುತ್ತಿತ್ತು. ಇನ್ನು ಜಂಪ್ ಮಾಡಬೇಕಾದ ಸ್ಪರ್ಧೆಗಳ ವೇಳೆ ಶೂ ಸಮಸ್ಯೆಯಾಗಿ ಕಾಡುತ್ತಿತ್ತು. ಕಾರಣ ಜಿಗಿದು ನೆಲಕ್ಕೆ ಬರುತ್ತಿದ್ದಂತೆ ಶೂ ಕಳಚಿ ಬಿಳುತಿತ್ತು. ಇಲ್ಲವೇ ಬೆರಳು ಹಾಗೂ ಕಾಲು ನೋವು ಕಾಣಿಸಿ ಭಾರೀ ಸಮಸ್ಯೆ ಎದುರಿಸುತ್ತಿದ್ದರು.
Advertisement
ಹೆಪ್ಟಾಥ್ಲಾನ್ ಒಟ್ಟು 7 ಸ್ಪರ್ಧೆಯಲ್ಲಿ 6,026 ಅಂಕ ಪಡೆದು ಸ್ವಪ್ನಾ ಚಿನ್ನಕ್ಕೆ ಮುತ್ತಿಕ್ಕಿದರು. ನಾಲ್ಕು ವರ್ಷಗಳ ಹಿಂದೆಯೂ ಏಷ್ಯಾನ್ ಗೇಮ್ಸ್ ನಲ್ಲಿ ಸ್ವಪ್ನಾ 5,178 ಅಂಕ ಗಳಿಸಿ 5ನೇ ಸ್ಥಾನ ಪಡೆದಿದ್ದರು.
ಏನಿದು ಹೆಪ್ಟಾಥ್ಲಾನ್?
100 ಮೀಟರ್, 200 ಮೀಟರ್, 800 ಮೀಟರ್, ಲಾಂಗ್ ಜಂಪ್, ಹೈ ಜಂಪ್, ಜಾವಲಿನ್ ಎಸೆತ, ಶಾಟ್‍ಪೂಟ್ ಸ್ಪರ್ಧೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಪದಕ ನೀಡಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Thanks @IamBhavaniDevi for nominating me for the fitness challenge! I further nominate @afiindia #HumFitTohIndiaFit #FitnessChallenge #fitnessfirst @Ra_THORe @Media_SAI pic.twitter.com/PoTxSRTW49
— Swapna Barman (@Swapna_Barman96) June 3, 2018