ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅಕ್ರಮದ ಪರ ನಿಂತಿರುವ ಸ್ವಾಮೀಜಿಗಳು, ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದಾ ಸಮುದಾಯಗಳ ಪ್ರತಿಭಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಜಾತ್ಯಾತೀತ ಅಂತಾರೆ. ಅವರು ಎಲ್ಲಿ ಜಾತಿ ಉಳಿಸಿಕೊಂಡಿದ್ದಾರೆ ಅವರೇ ಹೇಳಬೇಕು. ಕಾವಿಧಾರಿಗಳನ್ನು ಕಂಡ್ರೆ ಆಗ್ತಿರಲಿಲ್ಲ. ಈಗ ತಮ್ಮ ಸಂಕಷ್ಟಕ್ಕೆ ಕಾವಿಧಾರಿಗಳನ್ನೂ ಬಳಸಿಕೊಳ್ತಿದ್ದಾರೆ. ನಮಗೆ ಗುರುಗಳು, ಮಠಾಧೀಶರ ಮೇಲೆ ಗೌರವ ಇದೆ. ಅವರು ರಾಜಕಾರಣ ತೊಳೆಯುವ ಕೆಲಸ ಮಾಡಬೇಕೇ ಹೊರತು ಭ್ರಷ್ಟಾಚಾರ ಮಾಡಿದವರ ಬೆಂಬಲಿಸುವುದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನೀರಿನಲ್ಲಿ ಅಮಲು ಪದಾರ್ಥ ಸೇರಿಸಿ ಆಟೋ ಚಾಲಕನಿಂದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ರೇಪ್
ಈ ಸರ್ಕಾರ ಮುಡಾದಲ್ಲಿ ಭ್ರಷ್ಟಾಚಾರ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ಕೂಡ ಭ್ರಷ್ಟಾಚಾರ ಆಗಿ, ತನಿಖೆ ನಡೆಯುತ್ತಿದೆ. ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಜನರ ಬೆಂಬಲಕ್ಕೆ ನಿಲ್ಲಬೇಕು. ಅದು ಬಿಟ್ಟು ದಲಿತ ವರ್ಗಕ್ಕೆ ಅನ್ಯಾಯ ಮಾಡಿದವರ ಸಪೋರ್ಟ್‌ಗೆ ನಿಲ್ಲೋದು ಎಷ್ಟು ಸರಿ. ಅಂಬೇಡ್ಕರ್ ಹೆಸರೇಳಿ ದಲಿತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ದಲಿತರ ಸಮಾಧಿ ಕಟ್ಟುತ್ತಿದೆ. ಸ್ವಾಮೀಜಿಗಳು ದಲಿತರಿಗೆ ಅನ್ಯಾಯ ಮಾಡಿದ್ದೀರಿ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು. ಆದರೆ ಸರ್ಕಾರದ ಪರ ನಿಂತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅಹಿಂದಾ ಸಂಘಟನೆಗಳಿಂದ ಸಿಎಂ ಪರ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಲವು ದಲಿತ ಸಂಘಟನೆಗಳು ಸಿಎಂ ಪರವಾಗಿ ರಾಜಭವನ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ನಾಳೆ ದಲಿತ ಸಂಘಟನೆಗಳು ಸಭೆ ಕರೆದಿವೆ. ಕೆಲ ದಲಿತ ಸಂಘಟನೆಗಳು ಚಾಟಿ ಬೀಸಿವೆ. ಅಂಬೇಡ್ಕರ್ ಹೆಸರೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ. ದಲಿತರ ಪರವಾಗಿ ನಿಲ್ಲಬೇಕೇ ಹೊರತು. ದಲಿತರಿಗೆ ಅನ್ಯಾಯ ಮಾಡಿದವರ ಪರ ನಿಲ್ಲಬಾರದು. ಅವರ ಬೆಂಬಲಕ್ಕೆ ನಿಂತಿರೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ
ಸರ್ಕಾರದ ಪರವಾಗಿ ನಿಂತರೆ ಆಮಿಷಕ್ಕೆ ನಿಂತಿದ್ದೀರಿ ಅಂತಾಗುತ್ತದೆ. ದಲಿತರ ಪರವಾಗಿ ನಿಲ್ಲೋದು ಬಿಟ್ಟು, ಸರ್ಕಾರದ ಪರ ನಿಲ್ಲೋದು ಯಾಕೆ? ಸಿಎಂ ಪರ ಆಗಲಿ, ಯಾರ ಪರ ಯಾರಾದ್ರೂ ನಿಲ್ಲಲಿ. ಸರ್ಕಾರ ದಲಿತರಿಗೆ ಸವಲತ್ತು ನೀಡದೇ ಇದ್ದಾಗ ಹೋರಾಟ ಮಾಡಲಿ. 24 ಸಾವಿರ ಕೋಟಿ ರೂ. 187 ಕೋಟಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಅದನ್ನು ವಿರೋಧ ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ ಕೆಲ ಸಂಘಟನೆಗಳು ಅವರ ಪರ ನಿಲ್ಲುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಲಿದೆ ಎಂದು ಕಿಡಿಕಾರಿದ್ದಾರೆ.