Connect with us

Bengaluru City

ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

Published

on

ಬೆಂಗಳೂರು: ಮೇಲ್ನೋಟಕ್ಕೆ ಖಾವಿ ತೊಟ್ಟು ಸಮಾಜವನ್ನ ಉದ್ಧಾರ ಮಾಡೋದಾಗಿ ಪೋಸ್ ಕೊಡುತ್ತಿದ್ದ ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ಸ್ವಾಮಿಜಿಯೊಬ್ಬ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೋಡಗಿರೋ ದೃಶ್ಯವಿಂದು ಜಗತ್ ಜಾಹಿರಾಗಿದೆ.

ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಪುರಾತನ ಕಾಲದ ಮದ್ದೇವಣಾಪುರ ದೇವ ಸಿಂಹಾಸನ ಮಹಾ ಸಂಸ್ಥಾನ ಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ರಾಸಲೀಲೆಯಲ್ಲಿ ಸಿಕ್ಕಿಬಿದ್ದಿರೋ ಸ್ವಾಮೀಜಿ.

ಖಾವಿ ತೊಟ್ಟು ಜನ ಸಾಮಾನ್ಯರನ್ನ ಉದ್ಧಾರ ಮಾಡಿ ಸಮಾಜಸೇವೆಗೆ ದುಡಿಯೋದಾಗಿ ರಂಭಾಪುರ ಸ್ವಾಮಿಜಿಗಳ ಜೊತೆಯಲ್ಲಿ ಓಡಾಡುತ್ತಿದ್ದ ಕಳ್ಳ ಸ್ವಾಮೀಜಿ ಬೆಡ್ ರೂಮ್ ಒಳಗೆ ಮಹಿಳೆಯ ಜೊತೆ ಕಾಮದಾಟವಾಡುತ್ತಿರೋ ಹಸಿಬಿಸಿ ದೃಶ್ಯ ಲಭ್ಯವಾಗಿದೆ.

ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ತನ್ನ ಮಗನಾದ ದಯಾನಂದ್ ಗೆ 2011 ರಲ್ಲಿ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು. ಈ ವೇಳೆ ದಯಾನಂದ್‍ಗೆ ಸ್ವಾಮಿಜಿಯಾಗಲು ಅರ್ಹತೆಯಿಲ್ಲ ಅಂತ ಜನ ಸತತ ಹೋರಾಟದ ಮುಖಾಂತರ ದಯಾನಂದ್ ಪೀಠಾಧ್ಯಕ್ಷನಾಗಲು ಅಡ್ಡಿಪಡಿಸಿದ್ರು.

ಆದ್ರೂ ಸುಮ್ಮನಿರದ ದಯಾನಂದ್ ಹೇಗಾದ್ರು ಪೀಠಾಧ್ಯಕ್ಷನಾಗಿ ಅಂದು ಮೈಸೂರು ಮಹಾರಾಜರು ಮಠಕ್ಕೆ ನೀಡಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನ ಕಬಳಿಸೂ ಹುನ್ನಾರ ನಡೆಸುತ್ತಿದ್ದ ಎನ್ನಲಾಗಿದೆ. ಇದೀಗ ಈ ಕಳ್ಳ ಸ್ವಾಮಿಯ ರಾಸಲೀಲೆ ಬಹಿರಂಗವಾಗಿದೆ.

ಯಾವುದೇ ಕಾರಣಕ್ಕೂ ಇಂತಹ ಕಳ್ಳ ಸ್ವಾಮಿಗಳಿಗೆ ಪೀಠಾಧ್ಯಕ್ಷರ ಸ್ಥಾನ ನೀಡಬಾರದು ಅಂತ ಟ್ರಸ್ಟ್ ನ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *