ಬೆಂಗಳೂರು: ಇದು ರಾಜ್ಯರಾಜಕಾರಣದ ಟ್ವಿಸ್ಟ್ ಸ್ಟೋರಿ. ರಾಜಕಾರಣಿಗಳೇ ರಾಜಕಾರಣ ಮಾಡಬೇಕಾ? ನಾವು ರಾಜಕಾರಣ ಮಾಡ್ತೀವಿ, ಎಲೆಕ್ಷನ್‍ಗೆ ನಿಲ್ತೀವಿ. ನಮ್ಗೂ ಟಿಕೆಟ್ ಕೊಡಿ ಸ್ವಾಮಿ. ಟಿಕೆಟ್ ಪ್ಲೀಸ್ ಅಂತಾ ಸ್ವಾಮೀಜಿಗಳು ಕೇಳ್ತಿದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸ್ಫೂರ್ತಿಯಿಂದ ಮಠದ ಸ್ವಾಮೀಜಿಗಳು ಬಿಜೆಪಿ ಟಿಕೆಟ್‍ಗೆ ಕ್ಯೂ ನಿಂತಿದ್ದಾರೆ. 2018ರ ಚುನಾವಣೆಗೆ ಸ್ವಾಮೀಜಿಗಳು ಅರ್ಜಿ ಹಾಕಿದ್ದಾರೆ. ಒಟ್ಟು 8 ಮಠದ ಸ್ವಾಮೀಜಿಗಳಿಂದ ಬಿಜೆಪಿ ಹೈಕಮಾಂಡ್‍ಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಪಬ್ಲಿಕ್ ಟಿವಿಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
8 ಮಠದ ಸ್ವಾಮೀಜಿಗಳು ನೇರವಾಗಿ ಅಮಿತ್ ಶಾಗೆ ಅರ್ಜಿ ಸಲ್ಲಿಸಿದ್ದಾರೆ. 6 ಜಿಲ್ಲೆಗಳ 8 ಮಠದ ಸ್ವಾಮೀಜಿಗಳು ಟಿಕೆಟ್‍ಗೆ ಬೇಡಿಕೆ ಇಟ್ಟಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಬೀದರ್ ಜಿಲ್ಲೆಗಳಿಂದ ಮೂರು ಹಿಂದುಳಿದ ವರ್ಗ, 5 ವೀರಶೈವ- ಲಿಂಗಾಯತ ಸ್ವಾಮೀಜಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
ಹಾಗಾದ್ರೆ ಮಠದ ಸ್ವಾಮೀಜಿಗಳಿಗೆ ಬಿಜೆಪಿ ಮಣೆ ಹಾಕುತ್ತಾ? ಉತ್ತರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿ ರಾಜಕೀಯ ಟ್ವಿಸ್ಟ್ ಕೊಡುತ್ತಾ? ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.