ನವದೆಹಲಿ: ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ರಾಜ್ಯದ ಮೂರು ಪ್ರಭಾವಿ ಮಠಾಧೀಶರು ಶಿಫಾರಸ್ಸು ಮಾಡಿದ್ದಾರೆ.
Advertisement
ಹೌದು, ದಾವಣಗೆರೆ ಮೂಲದ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಟಿಕೆಟ್ ನೀಡಲು ಮಠಾಧೀಶರು ಮನವಿ ಮಾಡಿದ್ದಾರೆ. ಮೂರು ಪ್ರಭಾವಿ ಮಠಗಳ ಮಠಾಧೀಶರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಅವಕಾಶ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
Advertisement
Advertisement
ಕರಾವಳಿ, ಉತ್ತರ ಕರ್ನಾಟಕ, ಹಾಗೂ ಮಧ್ಯ ಕರ್ನಾಟಕದ ಪ್ರಭಾವಿಗಳ ಮಠಗಳ ಮಠಾಧೀಶರು ಈ ಪತ್ರ ಬರೆದಿದ್ದು ಡಾ.ಸಿ.ಆರ್ ನಸೀರ್ ಅಹ್ಮದ್ ಮಠದ ಭಕ್ತರಾಗಿದ್ದು, ಬಹಳಷ್ಟು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ರಾಜಕೀಯ ಅನುಭವವನ್ನು ಬಳಸಿಕೊಳ್ಳುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಬಡ್ಡಿ ಆಡುತ್ತಲೇ ಕೋರ್ಟ್‍ನಲ್ಲಿ ಕೊನೆಯುಸಿರೆಳೆದ ಕ್ರೀಡಾಪಟು!
Advertisement
ಪ್ರಭಾವಿ ಮಠಾಧೀಶರು ಮನವಿ ಮಾಡಿರುವ ಹಿನ್ನೆಲೆ ಬಿಜೆಪಿ ಡಾ.ಸಿ.ಆರ್ ನಸೀರ್ ಅಹ್ಮದ್‍ಗೆ ಟಿಕೆಟ್ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿಲ್ಲ. ಹೀಗಾಗಿ ಚುನಾವಣಾ ವರ್ಷದಲ್ಲಿ ಅವಕಾಶ ನೀಡುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಬಹುದಾ ಎನ್ನುವ ಕುತೂಹಲವಿದೆ. ಇದನ್ನೂ ಓದಿ: ಬಾಯಿ ಬಡಿದುಕೊಂಡು ಸಾಕಾಗಿ ಕಾಂಗ್ರೆಸ್ಸಿಗರು ಇಂದು ಮೌನಕ್ಕೆ ಶರಣಾಗಿದ್ದಾರೆ: ಸುಧಾಕರ್ ವ್ಯಂಗ್ಯ