ಚಿಕ್ಕೋಡಿ: ಕಲ್ಯಾಣ ರಾಜ್ಯ ಪ್ರಗತಿ (KRPP) ಸಮಾವೇಶದಲ್ಲಿ ಸ್ವಾಮೀಜಿಯೊಬ್ಬರು ಗಾಲಿ ಜನಾರ್ದನ ರೆಡ್ಡಿ (Janardhana Reddy) ಸಮ್ಮುಖದಲ್ಲಿಯೇ ಅಭ್ಯರ್ಥಿಗೆ 1 ಲಕ್ಷ ರೂ. ಹಣವನ್ನು (Money) ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ (Code of Conduct) ಉಲ್ಲಂಘಿಸಿದ್ದಾರೆ.
Advertisement
ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಆಯೋಜಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶದಲ್ಲೇ ಬಹಿರಂಗವಾಗಿ 1 ಲಕ್ಷ ರೂ. ಹಣವನ್ನು ಹೊನ್ಯಾಳದ ರೇವನಸಿದ್ದಯ್ಯ ಶ್ರೀಶೈಲಯ್ಯ ಶ್ರೀಗಳು ಕುಡಚಿ ಮತಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಶ್ರೀಶೈಲ ಭಜಂತ್ರಿಯವರಿಗೆ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: 70 ಸೀಟ್ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ: ಶಾಮನೂರು ಸ್ಫೋಟಕ ಹೇಳಿಕೆ
Advertisement
Advertisement
Advertisement
ಸಮಾವೇಶದಲ್ಲಿ ಬಹಿರಂಗವಾಗಿ ನೀತಿ ಸಂಹಿತೆ ಉಲ್ಲಂಘಿಸಿದರೂ ರಾಯಬಾಗಾ ತಾಲೂಕಾಡಳಿತ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಚೆಕ್ ಪೋಸ್ಟ್‌ಗಳ ಕಣ್ಣು ತಪ್ಪಿಸಿ 1 ಲಕ್ಷ ರೂ. ಬಂದಿದ್ದಾರೂ ಹೇಗೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಂಕಣಿ ಭಾಷಿಗರೇ ಶಾಸಕರಾಗಿರುವ ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಗೆಲ್ಲೋದ್ಯಾರು?