ಯಾದಗಿರಿ: ಜಿಲ್ಲೆಯ ಗವಿಸಿದ್ದೇಶ್ವರ ಸುಕ್ಷೇತ್ರದಲ್ಲಿ ಸ್ವಾಮೀಜಿಯೊಬ್ಬರು ಲೋಕಕಲ್ಯಾಣಕ್ಕಾಗಿ 22 ದಿನಗಳ ಕಾಲ ಸಮಾಧಿ ಯೋಗ ಮಾಡಿದ್ದಾರೆ.
ಕ್ಷೇತ್ರದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದೇವಸ್ಥಾನದ ಆವರಣದಲ್ಲಿರುವ ಗುಹೆಯೊಂದರಲ್ಲಿ 22 ದಿನಗಳ ಕಾಲ ಅನ್ನ, ನೀರಿಲ್ಲದೇ ಕಠಿಣ ಸಮಾಧಿ ಯೋಗ ಕೈಗೊಂಡು ಭಕ್ತರ ಪಾಲಿಗೆ ದೇವರಾಗಿದ್ದಾರೆ. ಮಂದಿರದ ಗುಹೆಯ ನಾಲ್ಕು ಕಡೆ ಮುಚ್ಚಲ್ಪಟ್ಟಿದ್ದು, ಬಾಗಿಲನ್ನು ಸಿಮೆಂಟ್ ಹಾಕಿ ಮುಚ್ಚಲಾಗಿತ್ತು.
Advertisement
Advertisement
ಬುಧವಾರದಂದು ಸಮಾಧಿ ಯೋಗ ಮುಕ್ತಾಯವಾದ ಹಿನ್ನೆಲೆಯಲ್ಲಿ ಗುಹೆಯ ಬಾಗಿಲಿಗೆ ಭಕ್ತಿಯಿಂದ ಪೂಜಾ ಕಾರ್ಯ ನೆರವೇರಿಸಿ ಜಯಘೋಷ ಹಾಕಿ ಬಾಗಿಲು ಒಡೆದು ಸ್ವಾಮೀಜಿಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯೊಂದಿಗೆ ಕರೆತರಲಾಯ್ತು.
Advertisement
Advertisement
ಬಳಿಕ ಸ್ವಾಮೀಜಿಗೆ ಕ್ಷೀರಾಭಿಷೇಕ ಮಾಡಿ ದೇವಸ್ಥಾನದಲ್ಲೇ ಚಂಡಿಕಾ ಹೋಮ ಹಾಗೂ ಇನ್ನಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮೌನ ಅನುಷ್ಠಾನ ಹಾಗೂ ಸಮಾಧಿ ಯೋಗ ಮುಕ್ತಾಯ ಕಾರ್ಯ ನಡೀತು.