ಹಾವೇರಿ: ಡೆತ್‍ನೋಟ್ ಬರೆದಿಟ್ಟು ಮಠದಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಮಹಾಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದವರು. ಇವರು ಹುಲ್ಲತ್ತಿ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿಯಾಗಿದ್ದರು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶಾಖಾ ಮಠದ ಸ್ವಾಮೀಜಿಯೂ ಆಗಿದ್ದರು.
Advertisement
ಕಳೆದ ಕೆಲವು ತಿಂಗಳುಗಳಿಂದ ಮಠದಲ್ಲಿ ವಾಸವಾಗಿದ್ದ ಸ್ವಾಮೀಜಿ ರಾತ್ರಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಗ್ರಾಮಸ್ಥರು ಮಠಕ್ಕೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಡೆತ್‍ನೋಟ್‍ನಲ್ಲಿ ಏನಿದೆ?
ಪೂಜ್ಯ ಗುರುಗಳೇ ಮತ್ತು ನನ್ನ ಬಂಧುಬಾಂದವರೇ ಹಾಗೂ ನನ್ನ ಮಿತ್ರರೇ, ನನ್ನ ಸಾವಿಗೆ ನಾನೇ ಕಾರಣ ಯಾರು ಹೊಣೆಗಾರರಲ್ಲ. ನನಗೆ ಮನಃಶಾಂತಿ ಇಲ್ಲ. ಅದಕ್ಕೆ ನಾನು ಮನಃಶಾಂತಿಗೋಸ್ಕರ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇವೆ. ನನ್ನ ಸಮಾಧಿ ಇದೇ ಮಠದಲ್ಲಿ ಮಾಡಿ. ಇದು ನನ್ನ ಕೊನೆಯ ಆಸೆ. ನಾನು ಯಾವ ಭಕ್ತರಿಗೂ ಕೆಟ್ಟದನ್ನು ಮಾಡಿರಲಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ.