ವಿವೇಕಾನಂದರು ಅಮೆರಿಕಾದಲ್ಲಿ ಗೋಮಾಂಸ ತಿಂದಿದ್ದರು – ಚಿಂತಕ ಪ್ರಸನ್ನ ವಿವಾದಾತ್ಮಕ ಹೇಳಿಕೆ

Public TV
2 Min Read
Prasanna

ಉಡುಪಿ: ವಿವೇಕಾನಂದರನ್ನು ನಾವು ಹಿಂದು ಧರ್ಮವನ್ನು ಕಾಪಾಡಿದ ಮನುಷ್ಯ ಎಂದು ಕಾಣುತ್ತಿದ್ದೇವೆ. ಆದರೆ ವಿವೇಕಾನಂದರು ಅಮೆರಿಕದಲ್ಲಿ ಗೋಮಾಂಸ ಎಂದು ತಿಂದಿದ್ದರು ಎಂದು ಚಿಂತಕ ಪ್ರಸನ್ನ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ನಡೆದ ಹೇರಾಮ್.. ರಾಮಾಯಣ ಸಂವಾದದಲ್ಲಿ ಮಾತನಾಡಿದ ಚಿಂತಕ ಪ್ರಸನ್ನ, ಅಮೆರಿಕದಲ್ಲಿ ವಿವೇಕಾನಂದರು ಗೋಮಾಂಸ ಸೇವಿದ್ದರು. ತಾವು ಸೇವನೆ ಮಾಡುತ್ತಿರೋದು ಗೋಮಾಂಸ ಎಂದು ಅವರಿಗೆ ತಿಳಿದಿತ್ತು. ಅಲ್ಲದೇ ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದರು. ಏಕೆಂದರೆ ಅವರು ಹಿಂದೂಗಳ ಮನಸ್ಸನಲ್ಲಿ ನೋವುಂಟು ಮಾಡಲು ಅಲ್ಲ. ಹಿಂದೂಗಳನ್ನು ಈ ಸಾಂಕೇತಿಕತೆಯಿಂದ ಹೊರಗೆಳೆದು ಸಮಕಾಲಿನ ಸತ್ಯವನ್ನು ಕಾಣಿಸುವಂತೆ ಮಾಡಲು. ಅವರಿಗೆ ಗೋವು ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು, ಅದನ್ನು ರೈತನ ಹೊಲದಲ್ಲಿಯೇ ಸಂರಕ್ಷಿಸಬೇಕು ಎಂಬುದನ್ನು ತಿಳಿದಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಹಿಂದು ಧರ್ಮದಲ್ಲಿರುವ ಅನೇಕ ವಿತಂಡಗಳನ್ನು ವಿಮರ್ಶಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

Scholar Prasanna

ರಾಮಾಯಣ ಗ್ರಂಥ ವೈಯಕ್ತಿಕ ತ್ಯಾಗದ ಬಗ್ಗೆ ತಿಳಿಸಿದ್ದು, ಇಂದಿನ ರಾಜಕಾರಣಿಗಳು ಸಹ ಇದನ್ನು ಮಾಡಲು ಹೊರಟ್ಟಿದ್ದಾರೆ. ರಾಹುಲ್ ಹೇಳಿರುವುದು ನಿಜ ಸಿಟ್ಟನ್ನು ಪ್ರೀತಿಯಿಂದ ಎದುರಿಸಬೇಕು. ಅವರು ಸತ್ಯವನ್ನು ಹೇಳಿದ್ದಾರೆ. ಆದರೆ ಅದು ನಮಗೇ ಹಾಸ್ಯವಾಗಿ ಕಾಣಿಸುತ್ತಿದೆ. ಆದರೆ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದರು ಹೆಚ್ಚು ಪ್ರಬಲವಾಗಿ ಕಾಣುತ್ತಾರೆ. ಇದಕ್ಕೆ ಕಾರಣ ರಾಹುಲ್ ಅವರ ಹಿಂದೆ ನಿಂತಿರುವ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, ಅವರನ್ನು ನಾವು ನಂಬಲ್ಲ ಎಂದರು. ಇದೇ ವೇಳೆ ಯಡಿಯೂರಪ್ಪ ಅವರನ್ನು ಜನರು ನಂಬುತ್ತಿಲ್ಲ. ಸದ್ಯ ನಾವು ನಿಜವಾದ ರಾಮನನ್ನು ತೋರಿಸಲು ಯತ್ನಿಸಿಬೇಕು ಎಂದರು.

ದೇವರು ರಾಮ ಎಂದು ಸಾಬೀತು ಪಡಿಸಲು ಹಲವರು ಯತ್ನಿಸುತ್ತಿದ್ದಾರೆ. ಇದು ಅವರ ವಿತಂಡವಾದ ಏಕೆಂದರೆ ಇಲ್ಲಿ ರಾಮನನ್ನು ಬೆಳವಣಿಗೆ ಇಲ್ಲದ ಪಾತ್ರವಾಗಿ ರೂಪಿಸುತ್ತಿದ್ದಾರೆ. ಆದರೆ ವಾಲ್ಮೀಕಿ ಬರೆದಿರುವುದು ದೇವ ಕಲ್ಪನೆ ಇಲ್ಲದ ರಾಮ, ತನ್ನ ಬದುಕಿನಿಂದ ದೈವತ್ವ ಪಡೆದಿರುವುದು ರಾಮಾಯಣ. ಇಂದಿನ ಹಿಂಸಾ ವಾದಕ್ಕೆ ದೇವರು ನನ್ನಿಂದ ಪ್ರತ್ಯೇಕ ಎಂಬ ಕಲ್ಪನೆಯೇ ಕಾರಣ ಎಂದು ಹೇಳಿದ್ದಾರೆ.

ರಾಮನಿಗಿಂತ ಸಭ್ಯ ಹನುಮ: ರಾಮ ನಮ್ಮ ನಿಮ್ಮಂತ ಮನುಷ್ಯ. ರಾಮರಾಜ್ಯ ಅಂದರೆ ಗ್ರಾಮ ರಾಜ್ಯ ಆಗಬೇಕು. ರಾಮನಿಗಿಂತ ಹನುಮಂತ ಸಭ್ಯ ಮನುಷ್ಯ. ಆದೆ ಸದ್ಯ ಹನುಮನಿಗೆ ರಾಕ್ಷಸ ಸ್ವರೂಪವನ್ನು ಕೊಡಲಾಗಿದೆ. ಆಂಜನೇಯನನ್ನು ಭಜರಂಗಬಲಿಯಾಗಿ ನೇಮಿಸಲಾಗಿದೆ. ಯಾರನ್ನು ಬಲಿ ಕೊಡಲು ನೇಮಕ ಮಾಡಿದ್ದೇವೆ. ಬಿಜೆಪಿಯವರು ರಾಮ ಮಂದಿರ ನಿರ್ಮಾಣ ಹುನ್ನಾರ ಎಬ್ಬಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣವಾದರೆ ನನಗೆ ಖುಷಿ. ಆದರೆ ಮಂದಿರದ ಹುನ್ನಾರವೇ ನನಗೆ ಆತಂಕ ವ್ಯಕ್ತಪಡಿಸಿದರು.

ಇಂದು ಹನುಮನ ಹೆಸರನ್ನು ನಾವು ದೇಶದಲ್ಲಿ ಕೇವಲ 20 ಪ್ರತಿಶತ ಇರುವ ಜನರನ್ನು ಚುಚ್ಚಲು ಬಳಕೆ ಮಾಡಲಾಗುತ್ತಿದೆ. 1 ಅಂಕಿ ಇದ್ದ ಅವರ ಸಂಖ್ಯೆ 300 ಕ್ಕಿಂತ ಹೆಚ್ಚಾಗಲು ರಾಮನ ಹೆಸರೇ ಕಾರಣ. ಇದನ್ನು ಅರಿತು ಬುದ್ಧಿಜೀವಿಗಳು ಕೋಣೆಯೊಳಗೆ ಇದ್ದೇವೆ. ಬೀದಿಗೆ ಬಂದು ಪ್ರಾಣ ಹೋದರೂ ಪರವಾಗಿಲ್ಲ ಸತ್ಯ ಹೇಳೋಣ ಎಂದರು.

Share This Article
1 Comment

Leave a Reply

Your email address will not be published. Required fields are marked *