ಪಂಚಕುಲಾ: ಸಂಝೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಎನ್‍ಐಎ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಸಾಭೀತು ಪಡಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎನ್‍ಐಎ ಕೌನ್ಸಿಲ್ ರಾಜನ್ ಮಲ್ಹೋತ್ರ ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
2007ರಲ್ಲಿ ನಡೆದ ಸಂಝೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟದಲ್ಲಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಭಾರತದಲ್ಲಿ ದೇವಾಲಯಗಳ ಮೇಲೆ ಭಯೋತ್ಪಾದಕರು ನಡೆಸುತ್ತಿದ್ದ ದಾಳಿಯ ವಿರುದ್ಧವಾಗಿ ಇಂತಹ ಕೃತ್ಯ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಸ್ವಾಮಿ ಆಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಣ್ ಮತ್ತು ರಜೀಂದ್ರ ಚೌಧರಿ ವಿರುದ್ಧ ಎನ್‍ಐಎ ಪ್ರಕರಣ ದಾಖಲಿಸಿತ್ತು.
Advertisement
2007ರ ಫೆಬ್ರವರಿ 18 ರಂದು ದೆಹಲಿಯಿಂದ ಪಾಕಿಸ್ತಾನದ ಲಹೋರ್‍ಗೆ ತೆರಳುತ್ತಿದ್ದ ರೈಲಿಗೆ ಹರಿಯಾಣದ ಪಣಿಪಾತ್ ಬಳಿ ಬಾಂಬ್ ದಾಳಿ ನಡೆಸಲಾಗಿತ್ತು. ಪರಿಣಾಮ ರೈಲಿನ ಎರಡು ಬೋಗಿಗಳು ಹಾನಿಯಾಗಿ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
Advertisement
ಮೊದಲು ಹರಿಯಾಣ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಆದರೆ 2010 ರಲ್ಲಿ ಪ್ರಕರಣ ಎನ್‍ಐಎಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದಲ್ಲಿ ಸುನೀಲ್ ಜೋಶಿ ಎಂಬಾತನ್ನು ಮಾಸ್ಟರ್ ಮೈಡ್ ಎಂದು ಅನುಮಾನಿಸಲಾಗಿತ್ತು. ಆದರೆ 2007ರ ಡಿಸೆಂಬರ್ ತಿಂಗಳಿನಲ್ಲಿ ಆತನನ್ನು ಮನೆಯ ಮುಂದೆಯೇ ಗುಂಡಿಟ್ಟು ಕೊಲೆ ಮಾಡಲಾಗಿತ್ತು.
ಉಗ್ರರು ದೇವಾಲಯಗಳನ್ನು ಗುರಿಯಾಗಿಸಿ ದಾಳಿಗೆ ಪ್ರತೀಕಾರವಾಗಿ ಅಸೀಮಾನಂದ ಸೇರಿ ಇತರರು ಪಾಕಿಸ್ತಾನ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಎನ್‍ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿತ್ತು.
Samjhauta Blast Case: Visuals of Aseemanand from Panchkula Court. He and three others were acquitted by Court. #Haryana pic.twitter.com/chjsCm28IS
— ANI (@ANI) March 20, 2019