ಬೆಳಗಾವಿ: ಸುವರ್ಣಸೌಧ ಮುಂಭಾಗದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಲು ನಿರ್ದೇಶನ ನೀಡಲಾಗಿದೆ ಎಂದು ನಗರದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾವಿಗೆ ಒಣಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಒದಗಿಸಿಕೊಂಡಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು. ಗುತ್ತಿಗೆದಾರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಲ್ಲಮ್ಮ ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದರು. ಆದರೆ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರಲಿಲ್ಲ, ಬೇರೆ ಸ್ಥಳಕ್ಕೆ ಕೆಲಸ ಮಾಡಲು ನಿಯೋಜಿಸಲಾಗಿತ್ತಷ್ಟೇ ಎಂದರು.
Advertisement
Advertisement
ಇದಲ್ಲದೇ ನಾನು ಕೂಡ ಸುವರ್ಣಸೌಧಕ್ಕೆ ಭೇಟಿ ನೀಡಿ ಸಂಬಳ ಕಟ್ ಮಾಡಬಾರದು. ಯಾರನ್ನು ಕೆಲಸದಿಂದ ತೆಗೆದುಹಾಕಬಾರದು ಅಂತಾ ಹೇಳಿದ್ದೆ. ಇನ್ನೂ ಬೇರೆ ಸ್ಥಳಕ್ಕೆ ಕೆಲಸ ಮಾಡಲು ಮಲ್ಲಮ್ಮಗೆ ತಿಳಿಸಲಾಗಿತ್ತು. ಆದರೆ ಬೇರೆ ಸ್ಥಳದಲ್ಲಿ ಕೆಲಸ ಮಾಡೋದಕ್ಕೆ ಮಹಿಳೆಗೆ ದೂರ ಆಗುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಅಂತಾ ಕೆಲ ಮಾಧ್ಯಮದವರು ಗಮನಕ್ಕೆ ತಂದರು. ಹೀಗಾಗಿ ತಕ್ಷಣದಿಂದಲೇ ಸುವರ್ಣ ಸೌಧದಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ. ಇಂದು ಅಥವಾ ನಾಳೆ ಕೆಲಸಕ್ಕೆ ಹಾಜರಾಗಬಹುದು. ಅವರಿಗೆ ಯಾವುದೇ ಸಂಬಳ ಕಟ್ ಮಾಡುವುದಿಲ್ಲ ಎಂದರು.
Advertisement
ಮನೆ ನಿರ್ಮಾಣ ವಿಚಾರವಾಗಿ ಮಾತನಾಡಿ, ಮೂಲತಃ ಖಾನಾಪೂರದ ತಾಲೂಕಿನ ಮಲ್ಲಮ್ಮಳಿಗೆ ಪತಿ ಮರಣ ಹೊಂದಿದ್ದಾರೆ. ಹೀಗಾಗಿ ಸದ್ಯ ತಮ್ಮ ಸಂಬಂಧಿಕರ ಮನೆಯಾಗಿರುವ ಕೊಂಡಸಕೊಪ್ಪ ಗ್ರಾಮದಲ್ಲಿ ಇದ್ದಾರೆ. ಮಲ್ಲಮ್ಮಗೆ ಮನೆ ಕೊಡೊದಕ್ಕೆ ಬೇಡಿಕೆ ಬಂದಿದೆ. ಈ ಬಗ್ಗೆ ಜಿಪಂ ಸಿಇಓ ಜೊತೆಗೆ ಚರ್ಚೆ ಮಾಡಿದ್ದೇನೆ. ಬಸ್ತವಾಡ ಗ್ರಾಮದಲ್ಲಿ ಜಾಗ ಇದೆ. ಅವರು ಒಪ್ಪಿದರೆ ಜಾಗ ಕೊಡುತ್ತೇವೆ. ಬಸವ ವಸತಿ ಇಲ್ಲವೇ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಕೊಡುತ್ತೇವೆ ಎಂದರು.