ರಾಯಚೂರು: ಮಂತ್ರಾಲಯ (Mantralaya) ಭಕ್ತರು, ಗುರು ರಾಘವೇಂದ್ರ ಸ್ವಾಮಿ ಮಠದ (Guru Raghavendra Swamy Mutt) ಶಿಲಾಮಂಟಪಕ್ಕೆ ಸುವರ್ಣ ಕವಚ ಕೊಡುಗೆ ನೀಡಿದ್ದಾರೆ.
ಬಹುಕೋಟಿ ಮೌಲ್ಯದ ಸುವರ್ಣ ಶಿಲಾಮಂಟಪ ಮೆಗಾ ಪ್ರಾಜೆಕ್ಟ್‌ಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಚಾಲನೆ ನೀಡಿದರು. ರಾಯರ ವೃಂದಾವನ ಹೊರಭಾಗದಲ್ಲಿ ಇರುವ ಶಿಲಾಮಂಟಪಕ್ಕೆ ಸುವರ್ಣ ಕವಚ ಸಿದ್ಧಪಡಿಸಲಾಗುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 88 ಕೋಟಿ ಅಕ್ರಮ – ಎಂಡಿ, ಲೆಕ್ಕಾಧಿಕಾರಿ ಅಮಾನತು
ಸುವರ್ಣ ಲೇಪಿತ ಗೋಪುರ ಬಳಿಕ ಈಗ ಸುವರ್ಣ ಶಿಲಾಮಂಟಪ ಕೊಡುಗೆ ನೀಡಲಾಗಿದೆ. ಭಾಗಶಃ ಪೂರ್ಣಗೊಂಡ ಸುವರ್ಣ ಕವಚಗಳಿಗೆ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು. ರಾಯರ ವೃಂದಾವನದ ಮುಂದೆಯಿಟ್ಟು ಕವಚಗಳಿಗೆ ಪೂಜೆ ಮಾಡಿದರು.
ಸುವರ್ಣ ಕವಚ ಕಾರ್ಯದ ಮುಂದುವರಿಕೆಗೆ ಶುಭಾರಂಭವನ್ನು ಶ್ರೀಗಳು ಸೂಚಿಸಿದರು. ಭಕ್ತರ ದೇಣಿಗೆಯಿಂದ ಮಠದ ಪ್ರಾಂಗಣದ ಶಿಲಾಮಂಟಪಕ್ಕೆ ಸುವರ್ಣ ಕವಚವಾಗುತ್ತಿದೆ. ಭಕ್ತರು ನೇರವಾಗಿ ಸೇವೆಯಲ್ಲಿ ಭಾಗವಹಿಸುವಂತೆ ಶ್ರೀಗಳು ಕರೆ ನೀಡಿದರು. ಇದನ್ನೂ ಓದಿ: ಪುರಿ ಜಗನ್ನಾಥ ಚಂದನ್ ಜಾತ್ರಾ ಉತ್ಸವದಲ್ಲಿ ಪಟಾಕಿ ಅವಘಡ – 15 ಮಂದಿಗೆ ಗಾಯ