ಬೆಂಗಳೂರು: ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ ರಸ್ತೆ ದಾಟುತ್ತಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದಿದ್ದಾನೆ.
Advertisement
ಬೀದಿ ನಾಯಿಗಳ ಮೇಲೆ ವಿಕೃತ ಮನಸ್ಸಿನಿಂದ ಗಾಡಿ ಹರಿಸುವ ಪ್ರಕರಣ ಹೆಚ್ಚುತ್ತಿದೆ. ಉದ್ದೇಶಪೂರ್ವಕವಾಗಿ ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಿ ಕೆಲ ನೀಚರು ವಿಕೃತಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಬೀದಿ ನಾಯಿಗಳ ಜೀವದ ಮೇಲಿನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಬಿದ್ದಿತ್ತು. ಸದ್ಯ ನಗರದಲ್ಲಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆಂಗೇರಿ ಸಮೀಪ ಬೇಕಂತಲೇ ಕಾರು ಹತ್ತಿಸಿ ಬೀದಿ ನಾಯಿ ಸಾಯಿಸಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸ್ಥಳೀಯ ರಾಮಚಂದ್ರ ಭಟ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಹಿಸುತ್ತಿದ್ದ ಬಾಲಕ – ಫೋಟೋ ವೈರಲ್
Advertisement
Advertisement
ಈ ಸಂಬಂಧ ದೂರುದಾರ ರಾಮಚಂದ್ರ ಭಟ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಘಟನೆ ಏಪ್ರಿಲ್ 19ರಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ 8.40ರ ಸುಮಾರಿಗೆ ಬಿಳಿ ಬಣ್ಣದ ಬ್ರಿಝ ಕಾರ್‌ನಲ್ಲಿ ಬಂದ ವ್ಯಕ್ತಿ ನಾಯಿ ರೋಡ್ ದಾಟುವಾಗ ಘಟನೆ ನಡೆದಿದೆ. ಪ್ರಕರಣ ಸಂಬಂಧ ದೂರು ನೀಡಲು ಹೋದಾಗ ಪೊಲೀಸರು ಸಹಕಾರ ನೀಡಲಿಲ್ಲ. ಬೆಳಗ್ಗೆ 12 ಗಂಟೆಗೆ ಹೋದ ನನಗೆ ಸಂಜೆ 7 ಗಂಟೆ ವರೆಗೂ ಎಫ್‍ಐಆರ್ ಮಾಡಲು ಸಮಯ ಬೇಕಾಯಿತು. ಕಾರಿನ ನಂಬರ್ ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಪೊಲೀಸರ ಕ್ರಮದ ಬಗ್ಗೆ ನಿರೀಕ್ಷಿಸ್ತಾ ಇದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಕಿಡಿಗೇಡಿಯ ವೆಹಿಕಲ್ ಸೀಜ್ ಮಾಡಿ, ಡಿಎಲ್ ರದ್ದು ಮಾಡಬೇಕೆಂದು ಆಗ್ರಹಿಸಿದರು. ಸಿಸಿಟಿವಿ ವೀಡಿಯೋ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಪೀಣ್ಯ ಫ್ಲೈಓವರ್ ದುರಸ್ತಿಗೆ ಬಂದು 3 ತಿಂಗಳು ಕಳೆದ್ರೂ ಸರ್ಕಾರ ಮೌನ..!
Advertisement