ಬೆಂಗಳೂರು: ಕಾರು ಅಪಘಾತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೊಮ್ಮಗ ಗೀತಾ ವಿಷ್ಣುವಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮಂಗಳವಾರ ರಾತ್ರಿ ಬಂಧನಕ್ಕೆ ಒಳಗಾದ ಗೀತಾವಿಷ್ಣುವನ್ನು ಸಿಸಿಬಿ ಪೊಲೀಸರು ಬುಧವಾರ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್ ಇಬ್ಬರು ಶ್ಯೂರಿಟಿ, 25 ಸಾವಿರ ರೂ. ಬಾಂಡ್ ಮತ್ತು ಪೊಲೀಸರು ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
Advertisement
ವಿಚಾರಣೆ ವೇಳೆ ಸಿಸಿಬಿ ಪರ ವಾದ ಮಂಡಿಸಿದ ಸರ್ಕಾರಿ ವಕೀಲರು, ವಿಷ್ಣು 4 ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಗಾಂಜಾ ಕಾರಿನಲ್ಲಿ ಸಿಕ್ಕಿದೆ. ಹೀಗಾಗಿ ಈ ಮಾಹಿತಿ ಪಡೆಯಲು ಪೊಲೀಸರ ವಶಕ್ಕೆ ನೀಡಬೇಕು ಎಂದು ವಾದಿಸಿದರು.
Advertisement
ಆದರೆ ಆರೋಪಿ ಪರ ವಕೀಲರು, ಪೊಲೀಸರು ಗೀತಾ ವಿಷ್ಣುವಿನ ಮೇಲೆ ಜಾಮೀನು ಸಿಗದೇ ಇರುವಂತಹ ಯಾವುದೇ ಪ್ರಕರಣ ದಾಖಲು ಮಾಡಿಲ್ಲ. ಅಷ್ಟೇ ಅಲ್ಲದೇ ಗಾಂಜಾ ಸೇವಿಸಿಲ್ಲ, ಗಾಂಜ ಸಿಕ್ಕಿರೋದು ಕೇವಲ 110 ಗ್ರಾಂ, ಅದು ಬೇರೆಯವರ ತಂದು ಇಟ್ಟಿರುವುದು. ಕಾರಿನಲ್ಲಿ ಇದು ಹೇಗೆ ಬಂದಿದೆ ಎನ್ನುವುದು ಇನ್ನು ತನಿಖೆಯಾಗಬೇಕಿದೆ. ನನ್ನ ಕಕ್ಷಿದಾರ ಬೆಂಗಳೂರಿನಲ್ಲೇ ಇರುವ ಕಾರಣ ವಿಚಾರಣೆಗೆ ಹಾಜರಾಗುತ್ತಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದ್ದರು.
Advertisement
Advertisement