ಶ್ರೀನಗರ: ಸಶಸ್ತ್ರ ಪಡೆಗಳ ಸತತ ಪ್ರಯತ್ನ ಭಯೋತ್ಪಾದಕರು ತಮ್ಮ ಸೋಲನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
SRINAGAR: Jammu & Kashmir Governor Satya Pal Malik unfurls the national flag at Sher-i-Kashmir stadium on the occasion of 73rd #IndiaIndependenceDay pic.twitter.com/IUh2ppZKi3
— ANI (@ANI) August 15, 2019
Advertisement
ಗುರುವಾರ ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಆಚರಿಸುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದಾಗಿದೆ. ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ಕೈಗೊಂಡ ಕ್ರಮದ ನಂತರ ರಾಜ್ಯದ ಜನತೆ ತಮ್ಮ ಅಸ್ಥಿತ್ವದ ಕುರಿತು ಚಿಂತಿಸಬೇಕಿಲ್ಲ. ಭಯೋತ್ಪಾದಕರ ನೇಮಕಾತಿಯಲ್ಲಿ ವಿಪರೀತ ಕುಸಿತ ಕಂಡಿದೆ. ಆದರೆ, ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಕಲ್ಲು ತೂರಾಟ ನಡೆದಿರುವ ಘಟನೆಗಳು ಕಂಡು ಬಂದಿವೆ ಎಂದು ತಿಳಿಸಿದರು.
Advertisement
SRINAGAR: National Security Advisor Ajit Doval and Jammu & Kashmir Governor Satya Pal Malik during #IndiaIndependenceDay celebrations at Sher-e-Kashmir stadium. pic.twitter.com/AN7vQW1WKO
— ANI (@ANI) August 15, 2019
Advertisement
ಧ್ವಜಾರೋಹಣದ ನಂತರ ಸತ್ಯಪಾಲ್ ಮಲಿಕ್ ಅವರು ಪ್ಯಾರಾ ಮಿಲಿಟರಿ ಪಡೆಗಳ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಪಥ ಸಂಚಲ ಹಾಗೂ ಮೆರವಣಿಗೆಯನ್ನು ವೀಕ್ಷಿಸಿದರು.
Advertisement
ಜಮ್ಮು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾತನಾಡಿ, ಕೇಂದ್ರ ಸರ್ಕಾರದಿಂದ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತರಿದ್ದರು.