ಯಾದಗಿರಿ: ಉಗ್ರನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಿಲ್ಲೆಯ (Yadgir) ಶಹಾಪುರ ವ್ಯಕ್ತಿಯೊಬ್ಬನನ್ನು ಜಾರ್ಖಂಡ್‍ನ (Jharkhand) ಎನ್‍ಐಎ (NIA) ತಂಡ ವಿಚಾರಣೆ ನಡೆಸಿದೆ.
ರಾಂಚಿಯ ಇನ್ಸ್‌ಪೆಕ್ಟರ್ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶಹಾಪುರಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ವಿಚಾರಣೆಗೊಳಪಡಿಸಿರುವ ವ್ಯಕ್ತಿ ಇನ್ಸ್ಟಾಗ್ರಾಮ್‍ನಲ್ಲಿ ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈತನನ್ನು ನಾಲ್ಕು ಗಂಟೆಗಳ ದೀರ್ಘಕಾಲ ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ
Advertisement
ಕಳೆದ ಜುಲೈನಲ್ಲಿ ಐಸಿಸ್ (ISIS) ಉಗ್ರ ಸಂಘಟನೆಯ ಓರ್ವ ಉಗ್ರನನ್ನ ರಾಂಚಿಯಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ಉಗ್ರನ ಜೊತೆ ಇನ್ಸ್ಟಾಗ್ರಾಮ್‍ನಲ್ಲಿ ಶಹಾಪುರದ ವ್ಯಕ್ತಿ ಸಂಪರ್ಕ ಹೊಂದಿದ್ದ. ಇದೇ ಕಾರಣದಿಂದ ಸಂಪರ್ಕಿತ ವ್ಯಕ್ತಿಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ಈ ಹಿಂದೆ ಸಹ ಶಹಾಪುರಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಎರಡನೇ ಸಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಉಗ್ರರನ್ನು ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಸಿಸಿಬಿ ಬಂಧಿಸಿತ್ತು. ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕ ಹಾಗೂ ಸ್ಯಾಟ್‍ಲೈಟ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ
Web Stories