ಸಸ್ಟೈನಬಲ್ ಫ್ಯಾಷನ್ ವೀಕ್ – ಫ್ಯಾಷನ್ ಪಾಪ್ ಅಪ್ ಮಾರಾಟ ಮೇಳ

Public TV
2 Min Read
Sustainable Fashion Week

ಬೆಂಗಳೂರು: ಇಂದಿರಾನಗರದಲ್ಲಿರುವ ಸ್ಮೂರ್ ಚಾಕೋಲೇಟ್ಸ್ ಮಳಿಗೆಯಲ್ಲಿ ಜುಲೈ 21ರಂದು ಸಸ್ಟೈನಬಲ್ ಫ್ಯಾಶನ್ ವೀಕ್ (SFW) ಇಂಡಿಯಾ ಸರ್ಕ್ಯುಲರ್ ಫ್ಯಾಷನ್ ಪಾಪ್ ಅಪ್ ಮಾರಾಟ ಮೇಳ ನಡೆಯಿತು.

ಡಾ. ಲಗ್ನಾ ಗೌಡ ಮತ್ತು ಪ್ರಿಯಾಂಕ ಅಭಿಷೇಕ್‌ ಅವರು ಸಸ್ಟೈನಬಲ್ ಫ್ಯಾಶನ್ ವೀಕ್ ಸಂಸ್ಥೆಯ ಸಂಸ್ಥಾಪಕರು. ಈ ಸಂಸ್ಥೆಯು ಉತ್ತಮ ಫ್ಯಾಷನ್ ಆಯ್ಕೆಗೆ ಸಂಬಂಧಿಸಿದಂತೆ ಸಮುದಾಯವನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಅಲ್ಲದೇ ಫ್ಯಾಷನ್ ಕೌಶಲ್ಯವನ್ನು ನೀಡುವ ಕೆಲಸವನ್ನೂ ಮಾಡುತ್ತಿದೆ. ಈ ಬಾರಿ ಸರ್ಕ್ಯುಲರ್ ಫ್ಯಾಷನ್ ಪಾಪ್ ಅಪ್ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಅಹಮದಾಬಾದ್‌ನಿಂದ ಪ್ರೀಲವ್ಡ್ ಬೈ ವಿರ್ಜಾ ಮತ್ತು ಮುಂಬೈನಿಂದ ಬೇಗ್ ಬಾರೋ ಸ್ಟೀಲ್ ಸ್ಟುಡಿಯೊದಂತಹ ಪ್ರಸಿದ್ಧ ಸರ್ಕ್ಯುಲರ್ ಫ್ಯಾಶನ್ ಬ್ರ‍್ಯಾಂಡ್‌ಗಳನ್ನು ಭಾರತದಾದ್ಯಂತ ಆಯ್ಕೆ ಮಾಡಲಾಗಿತ್ತು.

Sustainable Fashion Week 1

ಸರ್ಕ್ಯುಲರ್ ಫ್ಯಾಷನ್ ಪಾಪ್ ಅಪ್ ವಿಶೇಷತೆ:
ಸಕ್ಯುಲರ್ ಫ್ಯಾಷನ್ ಪಾಪ್ ಅಪ್ ವಸ್ತ್ರ ಹಾಗೂ ಫ್ಯಾಷನ್ ವಸ್ತುಗಳ ಮಾರಾಟವಾಗಿದೆ. ಇಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಿಸಿದ ಪರಿಕರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಸಾಂಪ್ರದಾಯಿಕವಾಗಿ ಉತ್ಪಾದಿಸಲಾದ ಹತ್ತಿ ಅಥವಾ ಪೆಟ್ರೋಲಿಯಂನಿಂದ ಪಡೆದ ಸಿಂಥೆಟಿಕ್ ಫೈಬರ್‌ಗಳಂತಹ ವಿರಳ ವಸ್ತುಗಳ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಈ ಬದಲಾವಣೆಯಿಂದ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಂಪನ್ಮೂಲದ ಹೆಚ್ಚಿನ ಬಳಕೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಇದನ್ನೂ ಓದಿ: Snooker Championship 2023: ಸೌದಿ ಅರೇಬಿಯಾದಲ್ಲಿ ಚಿನ್ನ ಗೆದ್ದು ಕೋಲಾರದ ಯುವತಿ ಸಾಧನೆ!

Sustainable Fashion Week

ಸರ್ಕ್ಯುಲರ್ ಫ್ಯಾಷನ್ ಪಾಪ್ ಅಪ್‌ನಲ್ಲಿ ಮಾರಾಟ ಮಾಡಲಾದ ವಸ್ತುಗಳು ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಿಸಲಾಗಿದ್ದು, ಇದು ಪರಿಸರ ಸ್ನೇಹಿ ಎನಿಸಿಕೊಂಡಿದೆ. ಪರಿಸರದ ಒಳಿತಿನ ಉದ್ದೇಶದಿಂದ ಈ ಮಾರಾಟ ನಡೆದಿದ್ದು, ಇಲ್ಲಿ ಉನ್ನತ ಮಟ್ಟದ ಐಷಾರಾಮಿ ಫ್ಯಾಷನ್ ವಸ್ತುಗಳಿಂದ ಹಿಡಿದು ದೈನಂದಿನ ಉಡುಗೆಗಳೂ ಇವೆ ಎಂದು ಗ್ರಾಹಕರು ತಿಳಿಸಿದ್ದಾರೆ.

ಎಸ್‌ಎಫ್‌ಡಬ್ಯು ಇಂಡಿಯಾ ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಈವೆಂಟ್‌ಗಳನ್ನು ನಡೆಸಲಿದ್ದು, ಸಾಧ್ಯವಿರುವ ಯಾವುದೇ ರೀತಿಯಲ್ಲಿ ಜಾಗೃತಿ ಹಾಗೂ ಸಮರ್ಥನೀಯ ಫ್ಯಾಷನ್ ಅನ್ನು ಬೆಂಬಲಿಸಲು ಇತರರನ್ನು ಪ್ರೋತ್ಸಾಹಿಸುತ್ತಿದೆ. ಇದನ್ನೂ ಓದಿ: ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

Web Stories

Share This Article