ಮಧ್ಯರಾತ್ರಿಯಲ್ಲಿ ಪೊಲೀಸರ ವಸತಿ ಗೃಹಕ್ಕೆ ನುಗ್ಗಿದ ಅನುಮಾನಸ್ಪದ ವ್ಯಕ್ತಿ

Public TV
1 Min Read
ckb mental man collage 1

-12 ಮನೆಗಳಿಗೆ ಹೊರಗಡೆಯಿಂದ ಲಾಕ್ ಮಾಡಿ ಸೋನು ಚೀರಾಟ

ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಪೊಲೀಸರ ವಸತಿ ಗೃಹಕ್ಕೆ ಅನುಮಾನಸ್ಪದ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಅಲ್ಲದೆ ಕಟ್ಟಡದ 12 ಮನೆಗಳಿಗೆ ಹೊರಗಡೆಯಿಂದ ಲಾಕ್ ಹಾಕಿ ಪೊಲೀಸ್ ವಸತಿ ಗೃಹದ ಕಟ್ಟಡದಲ್ಲಿ ಅರೆ ಹುಚ್ಚನಂತೆ ಚೀರಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆಂಧ್ರದ ಪುಟ್ಟಪರ್ತಿ ಮೂಲದ ರಾಜೇಂದ್ರ ಧಾಮಿ ಎಂಬುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಠಾಣೆಯಿಂದ ಬಿಡುಗಡೆ ಮಾಡಿ ಕಳುಹಿಸಿದರು. ಆದರೆ ಪೊಲೀಸ್ ಠಾಣೆಯಿಂದ ಹೊರಬಂದ ಅಸಾಮಿ ಸೀದಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಇದ್ದ ಪೊಲೀಸ್ ವಸತಿಗೃಹದ ಕಟ್ಟಡಕ್ಕೆ ನುಗ್ಗಿ ವಿಚಿತ್ರವಾಗಿ ವರ್ತಿಸಿದ್ದಾನೆ.

ckb mental man 2

ಕಟ್ಟಡದಲ್ಲಿದ್ದ 12 ಮನೆಗಳಿಗೆ ಹೊರಗಡೆಯಿಂದ ಲಾಕ್ ಮಾಡಿ ಸೋನು ಸೋನು ಎಂದು ಕೂಗಾಟ ಚೀರಾಟ ನಡೆಸಿದ್ದಾನೆ. ಇದರಿಂದ ನಿದ್ರೆಗೆ ಜಾರಿದ್ದ ಪೊಲೀಸರು ಹಾಗೂ ಕುಟುಂಬಸ್ಥರು ಹೊರ ಬರೋಣ ಎಂದರೆ ಮನೆ ಹೊರಗಡೆಯಿಂದ ಲಾಕ್ ಆಗಿದೆ. ಅಷ್ಟರಲ್ಲೇ ಅಕ್ಕಪಕ್ಕದ ಕಟ್ಟಡದವರು ಅನುಮಾನಸ್ಪದ ವ್ಯಕ್ತಿಯನ್ನು ಹಿಡಿಯಲು ಹೋದರೆ ಕಲ್ಲು ಹಾಗೂ ಅಲ್ಲಿದ್ದ ಕೋಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಆತಂಕಕ್ಕೆ ಓಳಗಾದ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಅನುಮಾನಸ್ಪದ ವ್ಯಕ್ತಿಯನ್ನು ಮರಳಿ ವಶಕ್ಕೆ ಪಡೆದರು.

ckb mental man 3

ಥೇಟ್ ಸಿನಿಮಾ ಸ್ಟೈಲಲ್ಲಿ ಮಿಡ್ ನೈಟ್ ಮೆಂಟಲ್ ಮ್ಯಾನ್ ಅಪರೇಷನ್ ಮಾಡಿದ ಪೊಲೀಸರು ಅನುಮಾನಸ್ಪದ ವ್ಯಕ್ತಿಯ ವರ್ತನೆಗೆ ಹೈರಾಣಾಗಿ ಹೋಗಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ನಗರ ಪೊಲೀಸರು ಅರೆ ಹುಚ್ಚನಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಮೆಂಟಲ್ ಮ್ಯಾನ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ ಆತನ ಬಳಿ ಇದ್ದ ಬ್ಯಾಗಿನಲ್ಲಿ ಬ್ಲೇಡ್, ನೇಪಾಳ ದೇಶದ ನೋಟುಗಳು ಸಹ ಪತ್ತೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *