ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ

Public TV
1 Min Read
Drone

ಬೆಂಗಳೂರು: ವಿಮಾನಗಳ ಹಾರಾಟದ ವೇಳೆ ನಿಷೇಧಿತ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಡ್ರೋನ್ (Drone) ಹಾರಾಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬುಧವಾರ ನಡೆದಿದೆ.

ನಿಲ್ದಾಣದ ರನ್‌ವೇ ಬಳಿ ವಿಮಾನಗಳ ಪಕ್ಕದಲ್ಲೇ ಡ್ರೋನ್ ಹಾರಾಡಿದೆ. ಟೇಕ್ ಆಫ್ ಸ್ಥಳದಿಂದ 6 ನಾಟಿಕಲ್ ಮೈಲಿ ದೂರದಲ್ಲಿ ಡ್ರೋನ್ ಹಾರಾಡಿದ್ದು, ಆಂತಂಕಕ್ಕೆ ಕಾರಣವಾಗಿದೆ. ಡ್ರೋನ್ ಹಾರಾಟ ಕಂಡು ತಕ್ಷಣ ಪೈಲಟ್‌ಗಳು ಎಟಿಸಿ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್, ಕಬಿನಿಯಿಂದ ಇಂದು ತಮಿಳುನಾಡಿಗೆ 6,075 ಕ್ಯೂಸೆಕ್ ನೀರು

ಮೂಲಗಳ ಪ್ರಕಾರ ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳ ಹಾರಾಟದ ಸ್ಥಳದಲ್ಲೇ ಕೇಸರಿ ಹಾಗೂ ಹಳದಿ ಬಣ್ಣದ ಡ್ರೋನ್ ಹಾರಿದೆ. ನಿಷೇಧದ ನಡುವೆಯೂ ಡ್ರೋನ್ ಹಾರಿದ್ದು ಹೇಗೆ ಎಂದು ಏರ್‌ಪೋರ್ಟ್ ಭದ್ರತಾ ಪಡೆ ಹಾಗೂ ಎಟಿಸಿ ಕಂಟ್ರೋಲ್ ಟೀಂ ತನಿಖೆ ನಡೆಸುತ್ತಿದೆ.

ಇದೀಗ ಡ್ರೋನ್ ಹಾರಾಟದ ಬಗ್ಗೆ ಏರ್‌ಪೋರ್ಟ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿಗೆ ‘ಸಿಟಿಜನ್ ಆಫ್ ಮುಂಬೈ’ ಪ್ರಶಸ್ತಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article