ಹಾಸನ | ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಪತ್ನಿ, ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ

Public TV
1 Min Read
Hassan women

ಹಾಸನ: ತಾಲೂಕು ಕಚೇರಿ ಸಿಬ್ಬಂದಿ (Taluk Office Staff) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ನಗರದ (Hassan City) ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ.

ಹೊಳೆನರಸೀಪುರ ತಾಲ್ಲೂಕು ಕಚೇರಿಯ ರೆಕಾರ್ಡ್ ರೂಂ ಸಿಬ್ಬಂದಿ (Record Room Staff) ಸತೀಶ್ (43) ಮೃತ ವ್ಯಕ್ತಿ. ಹದಿನೈದು ವರ್ಷಗಳ ಹಿಂದೆ ಹಾಸನದ ವಿದ್ಯಾ ಎಂಬುವವರ ಜೊತೆ ಮದುವೆಯಾಗಿದ್ದರು. ಇದನ್ನೂ ಓದಿ: ವಕೀಲರ ನೇಮಿಸಿಕೊಳ್ಳದ ಪ್ರಜ್ವಲ್‌ಗೆ ಉಚಿತ ಕಾನೂನು ಸೇವೆ – ಕೋರ್ಟ್‌ನಿಂದಲೇ ವಕೀಲರ ನೇಮಕ

Hassan women 2

ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು ಹಲವು ಬಾರಿ ಕುಟುಂಬಸ್ಥರು ರಾಜೀ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಜಗಳ, ವೈಮನಸ್ಸು ಸರಿಯಾಗಿರಲಿಲ್ಲ. ನಿನ್ನೆ (ಏ.28) ಬೆಳಗ್ಗೆ ಮನೆಯಲ್ಲೇ ಸತೀಶ್ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ: ಸುನೀಲ್ ಶೆಟ್ಟಿ

ಇನ್ನೂ ಪತ್ನಿ ಮತ್ತು ಅವರ ಕಡೆಯವರೇ ಸೇರಿ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಸತೀಶ್‌ ಕುಟುಂಬಸ್ಥರು ಆರೋಪಿಸಿದ್ದಾರೆ. ಸತೀಶ್‌ ತಲೆಗೆ ಪೆಟ್ಟಾಗಿರುವುದು ಮೇಲ್ನೋಟಕ್ಕೆ ಕಂದುಬಂದಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ.

ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ‌. ಸ್ಥಳಕ್ಕೆ ಹಾಸನ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

Share This Article