ಮಂಗಳೂರು: ನಗರದ ಆಟೋದಲ್ಲಿ ಕುಕ್ಕರ್ ಸ್ಫೋಟ(Cooker Blast) ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದ್ದು ಹೈ ಅಲರ್ಟ್ ಘೋಷಣೆಯಾಗಿದೆ.
ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ(FSL), ಬಾಂಬ್ ನಿಷ್ಕ್ರೀಯ ದಳದಿಂದ(Bomb Disposal Squad) ತೀವ್ರ ಪರಿಶೀಲನೆ ನಡೆಯುತ್ತಿದೆ.
Advertisement
Advertisement
ಬಾಕ್ಸ್ ಮತ್ತು ಬ್ಯಾಗ್‌ನಿಂದಲೇ ನಿಗೂಢ ಸ್ಪೋಟ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹ ಶೇ.50ರಷ್ಟು ಸುಟ್ಟು ಹೋಗಿದ್ದು ಚಿಕಿತ್ಸೆ ಮುಂದುವರಿದಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವವನ್ನು ನಾಗುರಿ ಬಳಿ ಪ್ರಯಾಣಿಕ ಹತ್ತಿದ್ದ. ಆಟೋ ಒಂದು ಕಿ.ಮೀ ಕ್ರಮಿಸುವಷ್ಟರಲ್ಲಿ ನಿಗೂಢ ಸ್ಫೋಟಗೊಂಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.
Advertisement
ಪರಿಶೀಲನೆ ವೇಳೆ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ದಾಖಲೆಯಲ್ಲಿ ಮೈಸೂರಿನ ವಿಳಾದ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮೈಸೂರಿಗೆ ತೆರಳಿದೆ. ಪ್ರಯಾಣಿಕನ ಬಳಿ 30 ಸಾವಿರ ರೂ. ನಗದು ಪತ್ತೆಯಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ದೂರು ನೀಡಿದರೂ ಕ್ರಮ ಕೈಗೊಳ್ಳದ ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್
Advertisement
ಏನಿದು ಘಟನೆ?
ಶನಿವಾರ ಸಂಜೆ 5 ಗಂಟೆಯ ವೇಳೆ ಮಂಗಳೂರಿನ(Mangaluru) ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟಗೊಂಡಿದೆ. ದಾರಿ ಮಧ್ಯೆ ಸವಾರನೋರ್ವ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದು ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ (Police) ಠಾಣೆಯ ಎದುರು ಆಟೋದ ಒಳಗೆ ಸ್ಫೋಟಗೊಂಡಿದ್ದು ಸವಾರನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿತ್ತು.