ಚಿಕ್ಕಬಳ್ಳಾಪುರ: ಅಂಗವಾಡಿಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಕಿರಾತಕರು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೆಂಕಟಲಕ್ಷ್ಮಮ್ಮ(50) ಕೊಲೆಯಾದ ದುರ್ದೈವಿ. ಗಂಡನಿಂದ ದೂರವಾಗಿ ಕಳೆದ ಕೆಲವು ವರ್ಷಗಳಿಂದ ವೆಂಕಟಲಕ್ಷ್ಮಮ್ಮ ಒಬ್ಬಂಟಿ ಜೀವನ ಸಾಗಿಸ್ತಿದ್ದರು. ಮನೆಯ ಕೆಲಸಗಳನ್ನು ಮುಗಿಸಿ ಅಂಗನವಾಡಿಗೆ ಹೋಗಬೇಕು ಎಂದು ಮನೆಯಿಂದ ಹೊರ ಹೋಗುವಷ್ಟರಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ವೆಂಕಟಲಕ್ಷ್ಮಮ್ಮನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಹೋಗಿದ್ದಾರೆ. ಕೊಲೆಯ ಹಿಂದೆ ಹಲವಾರು ಅನುಮಾನಗಳು ಮೂಡಿವೆ. ಇದನ್ನೂ ಓದಿ: ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ
Advertisement
Advertisement
ಹಿನ್ನೆಲೆ ಏನು?
ವೆಂಕಟಲಕ್ಷ್ಮಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ನಿವಾಸಿ. ಇವರಿಗೆ ಮದುವೆಯಾಗಿ ಮಗಳು ಇದ್ದಾಳೆ. ವೆಂಕಟಲಕ್ಷ್ಮಮ್ಮ ನಾಯನಹಳ್ಳಿ ಗ್ರಾಮದ ಪಕ್ಕದಲ್ಲೆ ಇರುವ ಚೊಕ್ಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದರು. ನಿನ್ನೆ ಅಂಗನವಾಡಿಗೆ ಹೋಗಲು ರೆಡಿಯಾಗಿ ಇನ್ನೇನು ಮನೆಯಿಂದ ಆಚೆ ಹೋಗಬೇಕಿತ್ತು, ಅಷ್ಟರಲ್ಲೆ ದುಷ್ಕರ್ಮಿಗಳ ಕೈಗೆ ಸಿಲುಕಿ ಕೊಲೆಯಾಗಿದ್ದಾರೆ.
Advertisement
1991 ರಲ್ಲಿ ವೆಂಕಟಲಕ್ಷ್ಮಮ್ಮ ಅವರಿಗೆ ಪಕ್ಕದ ಗ್ರಾಮ ಕತ್ತರಿಗುಪ್ಪೆಯ ಟಿ.ಆಂಜಪ್ಪನ ಜೊತೆ ಮದುವೆಯಾಗಿ ಮಗಳಿದ್ದಳು. ಆಂಜಪ್ಪ 1998ರಲ್ಲಿ ಹೆಂಡತಿಯನ್ನು ಬಿಟ್ಟು, ಬೇರೆ ಮದುವೆಯಾಗಿ ಬೇರೆ ಗ್ರಾಮದಲ್ಲಿ ಇದ್ದಾನೆ. ಮೃತಳಿಗೆ ಓರ್ವ ಮಗಳಿದ್ದು ಆಕೆ ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ಗಂಡನ ಜೊತೆ ವಾಸವಿದ್ದಾಳೆ. ಕಳೆದ ಎರಡು ದಿನಗಳಿಂದ ವೆಂಕಟಲಕ್ಷ್ಮಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಮಗಳು ಮತ್ತು ಅಳಿಯ ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟಿದ್ದಾರೆ. ಈ ವೇಳೆ ವೆಂಕಟಲಕ್ಷ್ಮಮ್ಮ ಔಷಧಿ ತೆಗೆದುಕೊಳ್ಳುವಂತೆ ನೆನಪಿಸಲು ಅವರಿಬ್ಬರು ಫೋನ್ ಮಾಡಿದ್ದಾರೆ.
Advertisement
ಆದರೆ ವೆಂಕಟಲಕ್ಷ್ಮಮ್ಮ ಅವರು ಫೋನ್ ರಿಸೀವ್ ಮಾಡಿಲ್ಲ. ಇದ್ರಿಂದ ಅನುಮಾನಗೊಂಡ ಮಗಳು ಮತ್ತು ಅಳಿಯ ಮನೆಗೆ ಬಂದು ನೋಡಿದ್ದಾರೆ. ಆಗ ಮನೆಯ ಬಾಗಿಲು ಸ್ವಲ್ಪ ಓಪನ್ ಆಗಿತ್ತು. ಒಳ ಹೋಗಿ ನೋಡಿದ್ರೆ ಮಂಚದ ಮೇಲೆ ವೆಂಕಟಲಕ್ಷ್ಮಮ್ಮ ಅವರ ಶವ ಕಾಣಿಸಿದೆ. ಇದರಿಂದ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ವೆಂಕಟಲಕ್ಷ್ಮಮ್ಮ ಅವರ ಮುಖ ಹಾಗೂ ಕತ್ತಿಗೆ ಮಾರಕಾಸ್ತ್ರಗಳಿಂದ ತಿವಿದು ಕೊಲೆ ಮಾಡಲಾಗಿದೆ. ಇದ್ರಿಂದ ಯಾರೊ ಪರಿಚಯಸ್ಥರು, ತನ್ನ ಪತ್ನಿಯ ಬಳಿ ಇದ್ದ ಚಿನ್ನಾಭರಣದ ದುರಾಸೆಗೆ ಕೊಲೆ ಮಾಡಿರಬಹುದು ಎಂದು ಮೃತನ ಪತಿ ಅಂಜಪ್ಪ ಹೇಳ್ತಿದ್ದಾರೆ. ಇದನ್ನೂ ಓದಿ: 1,231 ಮಂದಿಗೆ ಕೊರೊನಾ – ಸಿಲಿಕಾನ್ ಸಿಟಿಯಲ್ಲಿಯೇ 1,124 ಪ್ರಕರಣ
ವೆಂಕಟಲಕ್ಷ್ಮಮ್ಮ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ, ಚಿಂತಾಮಣಿ ಗ್ರಾಮಾಂತರ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್‍ಪಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗ ಮಹಿಳೆಯ ಕೊಲೆಯ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಪರಿಚಯಸ್ಥರೆ ವೆಂಕಟಲಕ್ಷ್ಮಮ್ಮ ಕೊಲೆ ಮಾಡಿರುವ ಬಗ್ಗೆ ಸಂಶಯ ಇರುವ ಹಿನ್ನೆಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.