ವಾಷಿಂಗ್ಟನ್: ಉಗ್ರರನ್ನು ನಿಗ್ರಹ ಮಾಡುವಲ್ಲಿ ಪಾಕಿಸ್ತಾನ ವಿಫಲವಾಗಿರುವುದಿಂದ ಅಮೆರಿಕ ನೀಡುತ್ತಿದ್ದ ಸೇನಾ ನೆರವನ್ನು ರದ್ದುಗೊಳಿಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಮೂಲಗಳು ತಿಳಿಸಿವೆ.
ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರು ಹೊಂದಿರುವ ಸುರಕ್ಷಿತ ತಾಣಗಳನ್ನು ನಾಶ ಮಾಡುವಲ್ಲಿ ಯಾವುದೇ ಶಿಸ್ತುಬದ್ಧ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅಲ್ಲದೇ ಅಮೆರಿಕದ ನಿರೀಕ್ಷೆಯ ಮಟ್ಟದಲ್ಲಿ ಉಗ್ರ ನಿಗ್ರಹ ಮಾಡುವಲ್ಲಿ ಪಾಕ್ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಸೇನಾ ನೆರವನ್ನು ರದ್ದುಗೊಳಿಸಿರುವ ಬಗ್ಗೆ ಟ್ರಂಪ್ ಆಡಳಿತ ಮೂಲಗಳು ಮಾಹಿತಿ ನೀಡಿವೆ.
Advertisement
Advertisement
ಅಮೆರಿಕದ ನಿರೀಕ್ಷೆಯಂತೆ ಇದೂವರೆಗೂ ಉಗ್ರರ ನಿಗ್ರಹಕ್ಕಾಗಿ ಪಾಕಿಸ್ತಾನ ಏನೂ ಮಾಡಿಲ್ಲ ಎನ್ನುವ ಹೇಳಿಕೆಯನ್ನು ಟ್ರಂಪ್ ಹೇಳಿದ್ದರು. ಈ ಬಗ್ಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಸುಧಾರಣೆಯು ಕಂಡುಬಂದಿಲ್ಲ. ಅಲ್ಲದೇ ಅಧ್ಯಕ್ಷ ಟ್ರಂಪ್ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮುಖಾಮುಖಿ ಭೇಟಿಗೆ ಇದುವೇ ದೊಡ್ಡ ಅಡೆತಡೆ ಎಂದು ಮೂಲಗಳು ತಿಳಿಸಿವೆ.
Advertisement
ಅಮೆರಿಕಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಉಗ್ರ ನಿಗ್ರಹಕ್ಕಾಗಿ ನಮ್ಮಿಂದ ಏನು ಸಾಧ್ಯವೋ, ಅವನ್ನೆಲ್ಲಾ ನಾವು ಮಾಡಿದ್ದೇವೆ. ಆದರೆ ಇನ್ನು ಮುಂದೆ ನಮಗೆ ಮತ್ತು ನಮ್ಮ ದೇಶದ ಜನರಿಗೆ ಏನು ಬೇಕೋ ಹಾಗೇ ಮಾಡುತ್ತೇವೆಯೇ ಹೊರತು, ಅಮೆರಿಕಕ್ಕೆ ಬೇಕಾಗುವ ಹಾಗೆ ಮಾಡುವುದಿಲ್ಲವೆಂದು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews