ತಿರುಪತಿ: ಅಮಾನತುಗೊಂಡಿದ್ದ ಆಂಧ್ರ ಪ್ರದೇಶದ (Andhra Pradesh) ಪ್ರಾಧ್ಯಾಪಕರೊಬ್ಬರ (Professor) ಮೃತದೇಹ ತಿರುಪತಿಯಲ್ಲಿ (Tirupati) ಪಾರ್ಕ್ ಮಾಡಿದ್ದ ಕಾರಿನೊಳಗೆ ಪತ್ತೆಯಾಗಿದೆ.
ಚಿತ್ತೂರು ಮೂಲದ ಡಾ. ವಿ. ಸರ್ದಾರ್ ಗುಗ್ಲೋತ್ (40) ಮೃತ ಪ್ರಾಧ್ಯಾಪಕರಾಗಿದ್ದು, ಅವರು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ವಾಣಿಜ್ಯ, ನಿರ್ವಹಣೆ ಮತ್ತು ಕಂಪ್ಯೂಟರ್ ವಿಜ್ಞಾನ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕೆಲದಿನಗಳ ಹಿಂದಷ್ಟೇ ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ಬಂಡೀಪುರ | ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ
ತಿರುಪತಿ ದೇವಸ್ಥಾನದ ಅಲಿಪಿರಿ ಪ್ರವೇಶ ದ್ವಾರದ ಬಳಿ ನಿಲ್ಲಿಸಿದ್ದ ವಾಹನದಿಂದ ದುರ್ವಾಸನೆ ಬರುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಕಾರಿನ ಗಾಜು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆ ವೇಳೆ ಪ್ರಾಧ್ಯಾಪಕರು ಕೆಲವು ದಿನಗಳ ಮೊದಲೇ ಸಾವನ್ನಪ್ಪಿದಂತೆ ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಗ್ಲೋತ್ ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದು, ಶವ ಪತ್ತೆಯಾದ ವಿಚಾರವನ್ನು ಅವರಿಗೆ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಡಿಕೆ ಕೊನೆ ಕೊಯ್ಯುವಾಗ ವಿದ್ಯುತ್ ಸ್ಪರ್ಶ – ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

